ವಿಂಗ್ ಕಮಾಂಡರ್ ಅಭಿನಂದನ್ ಭೇಟಿಯಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಪಾಕಿಸ್ತಾನದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭೇಟಿಯಾದ ರಕ್ಷಣೆ ಸಚಿವೆ ನಿರ್ಮಲಾ ಸೀತಾರಾಮನ್, ಅಭಿನಂದನ್ ಆರೋಗ್ಯ ವಿಚಾರಿಸದರು.

ಅಭಿನಂದನ್​ ವರ್ತಮಾನ್ ಅವರಿಗೆ​ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಬಳಿಕ ಅವರನ್ನು ವೈಮಾನಿಕ ಸಿಬ್ಬಂದಿಗಳಿಗಾಗಿಯೇ ಇರುವ ಪ್ರತ್ಯೇಕ ವಿಶೇಷ ವೈದ್ಯಕೀಯ ಕೇಂದ್ರ ಏರ್‌ಫೋರ್ಸ್‌ ಸೆಂಟ್ರಲ್‌ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್ (ಎಎಫ್‌ಸಿಎಂಇ) ಗೆ ಕರೆದೊಯ್ಯಲಾಯಿತು.

ವೈದ್ಯರ ತಪಾಸಣೆ ಬಳಿಕ ಅಭಿನಂದನ್ ಅರನ್ನು ಭೇಟಿಯಾದ ರಕ್ಷಣಾ ಸಚಿವೆ,ಅವರ ಆರೋಗ್ಯ ವಿಚಾರಿಸಿದರು. ಅಲ್ಲದೇ ಪಾಕಿಸ್ತಾನದಲ್ಲಿ ಅಭಿನಂದನ್ ಅವರನ್ನು ಯಾವ ರೀತಿ ನಡೆದುಕೊಳ್ಳಲಾಯಿತು ಎಂಬ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ . ರಕ್ಷಣಾ ಸಚಿವರ ಜತೆ ವಾಯುಪಡೆಯ ಹಿರಿಯ ಅಧಿಕಾರಿಗಳು ಸಹ ಇದ್ದರು.

ಬೆಳಿಗ್ಗೆ ಅಭಿನಂದನ್ ಏರ್‌ ಚೀಫ್‌ ಮಾರ್ಷಲ್ ಬಿ.ಎಸ್‌.ಧನೋಹಾರನ್ನು ಭೇಟಿಯಾಗಿದ್ದು, ಪಾಕಿಸ್ತಾನದಲ್ಲಿ ತಾನು ಸೆರೆಯಾಗಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ ಅಭಿನಂದನ್ ಕುಟುಂಬ ಸದಸ್ಯರನ್ನು ಹಾಗೂ ವಾಯುಪಡೆಯ ಹಲವು ಹಿರಿಯ ಅಧಿಕಾರಿಗಳನ್ನು ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.

Defence Minister Meets Air Force Pilot Abhinandan Varthaman In Hospital

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ