ನವದೆಹಲಿ: ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಪಾಕಿಸ್ತಾನ ತಂತ್ರ ರೂಪಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ಭಾರತೀಯ ಸೇನಾ ಶಿಬಿರಗಳಲ್ಲಿರುವ ಆಹಾರ ಡಿಪೋದಲ್ಲಿ ವಿಷ ಬೆರೆಸಲು ಪಾಕ್ ಪಿತೂರಿ ಮಾಡಿದ್ದು, ಇದನ್ನು ತನ್ನ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸೇರಿ ಸಂಚು ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಕಾಶ್ಮೀರದಲ್ಲಿರುವ ಭಯೋತ್ಪಾದಕರು ವಿಷ ಬೆರೆಸಬಹುದು ಎಂದು ಪಡಿತರ ಡಿಪೋಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಸೇನಾ ಕ್ಯಾಂಪ್ಗಳಲ್ಲಿರುವ ಆಹಾರ ಪದಾರ್ಥಗಳ ಬಗ್ಗೆ, ಕ್ಯಾಂಪ್ಗೆ ಪೂರೈಕೆಯಾಗುವ ಆಹಾರ ಧಾನ್ಯಗಳ ಮೇಲೂ ನಿಗಾ ಇರಿಸುವಂತೆ ಸೂಚನೆ ನೀಡಿದೆ.