ಮಹಿಳೆಯ ಬೆಳ್ಳಿ ವಸ್ತುವಿದ್ದ ಬ್ಯಾಗ್‍ನ್ನು ಅಪಹರಿಸಿದ ದರೋಡೆಕೋರರು

ಬೆಂಗಳೂರು, ಮಾ.1- ಪತಿ ಜತೆ ಬ್ಯಾಂಕ್‍ಗೆ ತೆರಳಿ ಲಾಕರ್‍ನಲ್ಲಿಟ್ಟಿದ್ದ ಒಂದು ಲಕ್ಷ ಬೆಲೆ ಬಾಳುವ ಬೆಳ್ಳಿ ವಸ್ತುಗಳನ್ನು ಬ್ಯಾಗನ್‍ನಲ್ಲಿಟ್ಟುಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ದರೋಡೆಕೋರರು ಹಿಂಬಾಲಿಸಿ ಬಂದು ಬ್ಯಾಗ್ ಎಗರಿಸಿ ಪರಾರಿಯಾಗಿರುವ ಘಟನೆ ಕೆ.ಎಸ್.ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶಾಂತಾ ಎಂಬುವರು ನಿನ್ನೆ ಬೆಳಗ್ಗೆ 11 ಗಂಟೆಯಲ್ಲಿ ಪತಿ ಜತೆ ಬ್ಯಾಂಕ್‍ಗೆ ಹೋಗಿ ಲಾಕರ್‍ನಲ್ಲಿಟ್ಟಿದ್ದ ಬೆಳ್ಳಿ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಆಟೋದಲ್ಲಿ ಬಂದಿದ್ದಾರೆ.

ಕೆಂಚನಹಳ್ಳಿ 3ನೇ ಕ್ರಾಸ್, 1ನೇ ಮುಖ್ಯರಸ್ತೆಯ ಮನೆ ಸಮೀಪ ಆಟೋ ನಿಲ್ಲಿಸಿ ಪತಿ ಜತೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಇಬ್ಬರು ದರೋಡೆಕೋರರು ಶಾಂತಾ ಅವರ ಕೈಯಲ್ಲಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ.

ಈ ಬಗ್ಗೆ ಕೆ.ಎಸ್.ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ