ಪತಿಯ ಕಿರುಕುಳದಿಂದ ನೊಂದ ಗೃಹಿಣಿ ಆತ್ಮಹತ್ಯೆ

ನೆಲಮಂಗಲ, ಫೆ.28- ಪತಿಯ ಕಿರುಕುಳದಿಂದ ಮನನೊಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದನಾಯಕನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಮೂಲದ ಕವಿತಾ (32) ಆತ್ಮಹತ್ಯೆಗೆ ಶರಣಾದ ಗೃಹಿಣಿ.

ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿಯ ಜನತಾ ಕಾಲೋನಿ ನಿವಾಸಿ ನಾಗರಾಜು ಎಂಬುವವರೊಂದಿಗೆ 9 ವರ್ಷದ ಹಿಂದೆ ಕವಿತಾ ವಿವಾಹವಾಗಿದ್ದರು.

ವಿನಾಕಾರಣ ಸಣ್ಣ ಸಣ್ಣ ವಿಚಾರಕ್ಕೂ ಪತ್ನಿಯೊಂದಿಗೆ ನಾಗರಾಜು ಜಗಳವಾಡುತ್ತಿದ್ದನೆನ್ನಲಾಗಿದೆ. ಈ ವಿಚಾರವನ್ನು ಕವಿತಾ ತನ್ನ ಪೋಷಕರಿಗೂ ತಿಳಿಸಿದ್ದರು.

ಕೌಟುಂಬಿಕ ವಿಚಾರವಾಗಿ ದಿನೇ ದಿನೇ ಪತಿ ಕಿರುಕುಳ ನೀಡುತ್ತಿದ್ದರಿಂದ ನೊಂದಿದ್ದ ಕವಿತಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಷಯ ತಿಳಿದ ಕವಿತಾ ಪೋಷಕರು ಬೆಂಗಳೂರಿಗೆ ಬಂದು ಅಳಿಯ ನಾಗರಾಜನ ವಿರುದ್ಧ ಮಾದನಾಯಕನಹಳ್ಳಿ ಪೋಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ