ಏರ್​ಸ್ಟ್ರೈಕ್​ ಮಾದರಿಯ ಪ್ರತೀಕಾರ ಮುಂದುವರಿಯುತ್ತೆ: ಚೀನಾದಲ್ಲಿ ಗುಡುಗಿದ ಸುಷ್ಮಾ

ವುಝೆನ್​: ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಏರ್​ಸ್ಟ್ರೈಕ್​ ಕುರಿತು ಚೀನಾದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿದ್ದಾರೆ. ಪ್ರತೀಕಾರವಾಗಿ ಇಂತಹುದೇ ಕಾರ್ಯಗಳು ನಮ್ಮಿಂದ ಮುಂದುವರೆಯಲಿವೆ ಎಂದು ಪಾಕ್​ಗೆ ಎಚ್ಚರಿಕೆ ರವಾನಿಸಿದ್ದಾರೆ.

ದಾಳಿಯ ಕುರಿತಾಗಿ ವಿದೇಶದಲ್ಲಿ ಸ್ಪಷ್ಟನೆ ನೀಡಿದ ಅವರು, ನಿನ್ನೆ ನಡೆದ ಏರ್​ಸ್ಟ್ರೈಕ್​ ಮಿಲಿಟರಿ ಕಾರ್ಯಾಚರಣೆ ಅಲ್ಲ. ಸೈನಿಕರನ್ನು ಅಲ್ಲಿ ನಿಯೋಜಿಸುವ ಗುರಿ ಇರಲಿಲ್ಲ. ಭಾರತದಲ್ಲಿ ಜೈಷ್​ ಎ ಮೊಹಮ್ಮದ್​ ಉಗ್ರರು ಮತ್ತಷ್ಟು ದಾಳಿ ನಡೆಸುವ ಬಗ್ಗೆ ಮಾಹಿತಿ ದೊರೆತಿದ್ದರಿಂದ ದಾಳಿ ನಡೆಸಲಾಯಿತು. ವಿಧ್ವಂಸಕ ಸನ್ನಿವೇಶಗಳು ಹೆಚ್ಚುವುದನ್ನು ಭಾರತ ಅಪೇಕ್ಷಿಸುವುದಿಲ್ಲ. ಭಾರತದದಿಂದ ಇಂತಹುದೇ ಕಾರ್ಯಗಳು ಪ್ರತೀಕಾರದ ರೂಪದಲ್ಲಿ ಮುಂದುವರೆಯುತ್ತವೆ ಎಂದಿದ್ದಾರೆ.

16ನೇ ರಷ್ಯಾ-ಭಾರತ-ಚೀನಾ ವಿದೇಶಾಂಗ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಪಾಕ್​ ತನ್ನ ನೆಲದಲ್ಲಿ ಉಗ್ರವಾದನ್ನು ಹತ್ತಿಕ್ಕುವಲ್ಲಿ ಹಿಂದೆ ಸರಿಯುತ್ತಿದೆ. ಇದರಿಂದ ಕೊಬ್ಬಿದ ಜೈಷೆ ಉಗ್ರರು ಭಾರದಲ್ಲಿ ಮತ್ತಷ್ಟು ವಿಧ್ವಂಸಕ ಕೃತ್ಯ ಎಸಗುವ ಯೋಜನೆಯಲ್ಲಿದ್ದರು. ಕೇಂದ್ರ ಸರ್ಕಾರ ಇದನ್ನು ತಡೆಯಬೇಕೆಂಬ ಉದ್ದೇಶದಿಂದ ದಾಳಿಗೆ ಅನುಮತಿ ನೀಡಿತು. ಅಲ್ಲದೆ, ನಾಗರಿಕರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಿ, ದಾಳಿ ಮಾಡಲಾಗಿದೆ ಎಂದು ಸುಷ್ಮಾ ಸ್ಪಷ್ಟನೆ ನೀಡಿದ್ದಾರೆ.

ಪುಲ್ವಾಮಾ ದಾಳಿ ನಂತರ ಜೈಷೆ ಸೇರಿ ಇತರೆ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯಗಳು ತಿಳಿಸಿದರೂ ಪಾಕಿಸ್ತಾನ ಕೇಳಲಿಲ್ಲ. ದಾಳಿ ಬಗ್ಗೆ ಅಲ್ಲಗಳೆಯುತ್ತಲೆ ಬಂದ ಪಾಕ್​, ಜೈಷೆ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದು ಸುಷ್ಮಾ ಕಿಡಿಕಾರಿದ್ದಾರೆ.

ಪುಲ್ವಾಮಾದಂತಹ ಭೀಕರ ಕೃತ್ಯಗಳು ಎಲ್ಲ ದೇಶಗಳಿಗೆ ಅಸಹನೀಯವಾಗಬೇಕು ಹಾಗೂ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಅವರು ಕರೆ ನೀಡಿದರು.

ಈ ವೇಳೆ ಪುಲ್ವಾಮಾ ಘಟನೆಯನ್ನು ಸ್ಮರಿಸಿದ ಸುಷ್ಮಾ ಅವರು, ಪಾಕ್ ಪೋಷಿತ ಜೈಷೆ ಸಂಘಟನೆಯ ಕ್ರೂರ ದಾಳಿಯಲ್ಲಿ ನಮ್ಮ 40ಕ್ಕೂ ಹೆಚ್ಚು ಸಿಆರ್​ಪಿಎಫ್​ ಯೋಧರು ಹುತಾತ್ಮರಾದರು. ಮತ್ತೆ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದನ್ನು ವಿವರಿಸಿದರು.

ಚೀನಾದ ವಿದೇಶಾಂಗ ಸಚಿವ ಸೆರ್ಜೆ ಲವ್ರೊವ್​, ಸುಷ್ಮಾ ಅವರನ್ನು ಆದರಿಂದ ಬರಮಾಡಿಕೊಂಡರು. ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಮುಂದುವರೆಸುವ ಮಾತುಕತೆ ನಡೆದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ