ಜಫ್ರುಲ್ಲಾಖಾನ್ ಅವರಿಗೆ ಜರ್ಮನಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್

ಬೆಂಗಳೂರು, ಫೆ.25- ವಿವಿಧ ಕ್ಷೇತ್ರಗಳಲ್ಲಿನ ಸಮಾಜಸೇವೆಯನ್ನು ಪರಿಗಣಿಸಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಅವರಿಗೆ ಜರ್ಮನಿಯ ಇಂಟರ್ ನ್ಯಾಷನಲ್ ಪೀಸ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.

ಉದ್ಯಮಿಯೂ ಆಗಿರುವ ಜಫ್ರುಲ್ಲಾಖಾನ್ ಅವರು ಸಮಾಜಸೇವೆಯಲ್ಲಿ ತೊಡಗಿಕೊಂಡು ದುಬೈನಲ್ಲಿ ಕನ್ನಡ ಸಂಘಗಳ ಮಹಾಪೋಷಕರಾಗಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ.

ಅಲ್ಲದೆ ಕರ್ನಾಟಕದಲ್ಲಿ ಬಡವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿರುವುದಲ್ಲದೆ ಕ್ರೀಡೆ, ಸಾಹಿತ್ಯ ಮತ್ತಿತರ ಕ್ಷೇತ್ರಗಳಿಗೂ ಸಹಾಯಹಸ್ತ ನೀಡುತ್ತಾ ಕಳೆದ 37ವರ್ಷಗಳಿಂದ ಸತತವಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಇದೆಲ್ಲವನ್ನೂ ಪರಿಗಣಿಸಿ ತಮಿಳುನಾಡಿನ ಹೊಸೂರಿನಲ್ಲಿರುವ ಇಂಟರ್ ನ್ಯಾಶನಲ್ ಪೀಸ್ ವಿಶ್ವವಿದ್ಯಾಲಯ ವತಿಯಿಂದ ಜರ್ಮನಿಯ ಇಪಿಯು ಕೋರ್ಸ್ ಡೈರೆಕ್ಟರ್ ಡೇನಿಯ ನೋರ ಬ್ರೆನಿರ್ಯಾ ಅವರು ಜಫ್ರುಲ್ಲಾ ಖಾನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.

ದುಬೈನಲ್ಲಿ ಕನ್ನಡದ ಕಂಪನ್ನು ಬೀರಿ ಸಮಾಜ ಸೇವೆಯಲ್ಲಿ ಹೆಸರು ಮಾಡಿರುವ ಜಫ್ರುಲ್ಲಾ ಖಾನ್ ಅವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿರುವುದು ಕನ್ನಡ ನಾಡಿನ ಜನತೆಗೆ ಹಾಗೂ ದುಬೈ ಕನ್ನಡಿಗರಿಗೆ ಹೆಮ್ಮೆಯ ವಿಷಯವೆಂದು ಜಫ್ರುಲ್ಲಾ ಖಾನ್ ಸಮಾಜ ಸೇವಾ ಬಳಗದ ರಾಜ್ಯಾಧ್ಯಕ್ಷ ಡಿ.ಎನ್. ಸುರೇಶ್‍ಬಾಬು ಅಭಿನಂದಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ