ನವದೆಹಲಿ, ಫೆ.25- ಪುಲ್ವಾಮಾ ಭಯೋತ್ಪಾದಕರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟು ಉಭಯದೇಶಗಳ ಎಲ್ಲ ಕ್ಷೇತ್ರಗಳಲ್ಲೂ ಪರಸ್ಪರ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ.
ಪುಲ್ವಾಮಾ ಭಯೋತ್ಪಾದನೆ ಖಂಡಿಸಿ ಭಾರತದ ಕೆಲವು ಗ್ರಾಮಗಳಿಂದ ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ಟಮೊಟೊಗಳನ್ನು ನಿಷೇಧಿಸಿರುವುದಕ್ಕೆ ಪಾಕಿಸ್ತಾನದ ಪತ್ರಕರ್ತನೊಬ್ಬನ ಉಧ್ಟತನದ ಹೇಳಿಕೆಗೆ ಭಾರತದ ಟ್ವಿಟೀಗರು ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.
ಟಮೊಟೊ ಬದಲಾಗಿ ನಾವು ಆಟಂಬಾಂಬ್ನಿಂದ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನದ ಪತ್ರಕರ್ತನೊಬ್ಬ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೋಪಗೊಂಡ ಭಾರತೀಯರು ಆತನಿಗೆ ಚಳಿ ಬಿಡಿಸಿದ್ದಾರೆ.
ಕಚೇರಿಯೊಂದರಲ್ಲಿ ಕುಳಿತು ಈ ಪತ್ರಕರ್ತ ಪಾಕಿಸ್ತಾನದ ಶಕ್ತಿಯನ್ನು ಕಂಡು ಭಾರತೀಯರು ಹೆದರಿ ಟಮೊಟೋ ರಫ್ತು ಮಾಡುವುದನ್ನು ನಿಲ್ಲಿಸಿದ್ದಾರೆ. ನಿಮ್ಮ ಮೋದಿ ಅಥವಾ ರಾಹುಲ್ ಅವರ ಟಮೊಟೋ ನಮಗೆ ಬೇಕಿಲ್ಲ. ನಾವೇ ಟಮೊಟೋ ಬೆಳೆಯುತ್ತೇವೆ. ಅಲ್ಲದೆ ಟಮೊಟೋಗೆ ಬದಲಾಗಿ ಆಟಂಬಾಂಬ್ನಿಂದ ಉತ್ತರ ನೀಡುತ್ತೇವೆ ಎಂದು ವಿಡಿಯೋದಲ್ಲಿ ಹರಟಿದ್ದಾನೆ ಇದಕ್ಕೆ ಭಾರತದ ಟ್ವಿಟ್ರ್ಥಿಗಳು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಈ ಮಹಾನುಭಾವ ಮಾತನಾಡುತ್ತಿದ್ದರೆ. ಆತನ ಹಿಂದೆ ಇರುವ ಸಹದ್ಯೋಗಿಗಳು ಆತನ ಮಾತುಗಳಿಗೆ ನಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇನ್ನೂ ಈತನ ಮಾತನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವೇ ಎಂದು ಒಬ್ಬರು ಟೀಕಿಸಿದ್ದಾರೆ.
ಮತ್ತೊಂದು ಟ್ವಿಟರ್ ಪ್ರತಿಕ್ರಿಯೆ: ಇದ್ಯಾವುದೊ ಪಾಕಿಸ್ತಾನದ ಟಿವಿ ಛಾನಲ್ ಭಾರತೀಯರಿಗೆ ಪುಕ್ಕಟೆ ಮನರಂಜನೆ ನೀಡುವುದಕ್ಕೆ ಇದೆ ಏನೋ ಎಂದು ಲೇವಡಿ ಮಾಡಿದ್ದಾರೆ.
ಈ ಮಹಾನುಭಾವ 2ನಿಮಿಷ 28ಸೆಕೆಂಡ್ಗಳ ಕಾಲ ಮಾತನಾಡಿರುವ ವಿಡಿಯೋ ಇದೆ. ಈತನ ಹೇಳಿಕೆಯಲ್ಲಿ 18ಭಾರಿ ತೌಬಾ ತೌಬಾ(ಪಶ್ಚಾತಾಪ ರೀತಿ) ಉದ್ಘಾರಗಳಿವೆ. ಈತನ ಮಾತು ಎಷ್ಟು ಗಂಭೀರ ಎಂದು ಇದರಿಂದ ಗೊತ್ತಾಗುತ್ತದೆ ಎಂದು ಮತ್ತೊಬ್ಬರು ಛೇಡಿಸಿದ್ದಾರೆ.