ವಿಶಾಖಪಟ್ಟಣದಲ್ಲಿ ನಡೆದ ರೋಚಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಮಂಡಿಯೂರಿತು. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ವಿರಾಟ್ ಪಡೆ ಮಾಡಿದ ಕೆಲವು ಯಡವಟ್ಟುಗಳಿಂದ ಸೋಲು ಕಂಡಿತು. ಹಾಗಾದ್ರೆ ಬನ್ನಿ ವಿರಾಟ್ ಪಡೆ ಸೋತಿದ್ದು ಹೇಗೆ ಅನ್ನೋದನ್ನ ನೋಡೋಣ.
ಆರಂಭದಲ್ಲೆ ಯಡವಟ್ಟು ಮಾಡಿಕೊಂಡ ಟೀಂ ಇಂಡಿಯಾ
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಟೀಂ ಇಂಡಿಯಾಗೆ ಓಪನರ್ಸ್ಗಳಾದ ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಆeಛಿಟಿಣ ಓಪನಿಂಗ್ ಕೊಡುವಲ್ಲಿ ಎಡವಿದ್ರು. 5 ರನ್ಗಳಿಸಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ಬೆಹ್ರೆನ್ ಡ್ರೋಫ್ ಎಸೆತದಲ್ಲಿ ಆ್ಯಾಡಮ್ ಜಾಂಪಾಗೆ ಕ್ಯಾಚ್ ನೀಡಿ ಹೊರ ನಡೆದ್ರು.
ಎರಡನೇ ವಿಕೆಟ್ಗೆ ಕನ್ನಡಿಗ ರಾಹುಲ್ ಜೊತೆಗೂಡಿದ ವಿರಾಟ್ ಕೊಹ್ಲಿ ಆರಂಭಿಕ ಆಘಾತವನ್ನ ತಡೆದರು. ಆಸಿಸ್ ಬೌಲರ್ಗಳನ್ನ ಬೆಂಡೆತ್ತಿದ ಈ ಜೋಡಿ 55 ರನ್ ಸೇರಿಸಿ ಬಿಗ್ ಟಾರ್ಗೆಟ್ ಕಲೆ ಹಾಕುವ ಸೂಚನೆ ನೀಡಿತು.
ಇನ್ನೇನು ಈ ಜೋಡಿ ಗಟ್ಟಿಯಾಗಿ ನಿಲ್ಲುತ್ತೆ ಅಂದುಕೊಳ್ಳುವಾಗಲೇ 24 ರನ್ ಗಳಿಸಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಎಡಗೈ ಸ್ಪಿನ್ನರ್ ಆ್ಯಡಮ್ ಜಾಂಪಾ ಎಸೆತದಲ್ಲಿ ಲಾಂಗ್ನಲ್ಲಿದ್ದ ಕೌಲ್ಟರ್ ನೈಲ್ಗೆ ಕ್ಯಾಚ್ ನೀಡಿ ಹೊರ ನಡೆದ್ರು.
ಅರ್ಧ ಶತಕ ಬಾರಿಸಿ ಮಿಂಚಿದ ಕೆ.ಎಲ್. ರಾಹುಲ್
ಕಾಂಗರೂಗಳನ್ನ ಮನಬಂದಂತೆ ಚೆಂಡಾಡಿದ ಕನ್ನಡಿಗ ಕೆ.ಎಲ್. ರಾಹುಲ್ 35 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ್ರು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ. 50 ರನ್ಗಳಿಸಿದ್ದ ರಾಹುಲ್ ಕೌಲ್ಟರ್ ನೈಲ್ ಎಸೆತದಲ್ಲಿ ಕ್ಯಾಪ್ಟನ್ ಪೀಂಚ್ಗೆ ಕ್ಯಾಚ್ ನೀಡಿ ಹೊರ ನಡೆದ್ರು.
ಪೆವಿಲಿಯನ್ ಪರೇಡ್ ನಡೆಸಿದ ಟೀಂ ಇಂಡಿಯಾ
ರಾಹುಲ್ ಔಟ್ ಆಗುತ್ತಿದ್ದಂತೆ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡು ಪೆವಿಲಲಿಯನ್ ಪರೇಡ್ ನಡೆಸಿತು. ಮಿಡ್ಲ್ ಆರ್ಡರ್ನಲ್ಲಿ ಬಂದ ರಿಷಭ್ ಪಂತ್ ರನೌಟ್ ಬಲೆಗೆ ಬಿದ್ರೆ ದಿನೇಶ್ ಕಾರ್ತಿಕ್, ಆಲ್ರೌಂಡರ್ ಕೃನಾಲ್ ಪಾಂಡ್ಯ ಮತ್ತು ಉಮೇಶ್ ಯಾದವ್ ಒಂದಂಕಿ ರನ್ ಹೊಡೆದು ನಿರಾಸೆ ಗೊಳಿಸಿದ್ರು.
ಟೀಂ ಇಂಡಿಯಾ 7 ವಿಕೆಟ್ಗೆ 126 ರನ್
ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಧೋನಿ ಅಜೇಯ 29 ರನ್ ಗಳಿಸಿದ್ರು. ಕೊನೆಗೆ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ವೇಗಿ ಕೌಲ್ಟರ್ ನೈಲ್ ಮೂರು ವಿಕೆಟ್ ಪಡೆದು ಮಿಂಚಿದ್ರು.
ಆರಂಭಿಕ ಆಘಾತ ಅನುಭವಿಸಿದ ಆಸ್ಟ್ರೇಲಿಯಾ
127ರನ್ಗಳ ಸುಲಭ ಟಾರ್ಗೆಟ್ ಪಡೆದ ಆ್ಯರಾನ್ ಫಿಂಚ್ ಪಡೆ ಆರಂಭದಲ್ಲೆ ರನೌಟ್ ಖೆಡ್ಡಾಗೆ ಬಿದ್ದು ಆರಂಭಿಕ ಆಘಾತ ಅನುಭವಿಸಿತು. 1 ರನ್ ಗಳಿಸಿದ್ದ ಸ್ಟೋಯ್ನಿಸ್ ಯಜುವೇಂದ್ರ ಚಹಲ್ ಎಸೆತದಲ್ಲಿ ರನೌಟ್ ಬಲೆಗೆ ಬಿದ್ರು.
ಇದಾದ ನಂತರ ಒಂದನೇ ಕ್ರಮಾಂಕದಲ್ಲಿ ಬಂದಿದ್ದ ಕ್ಯಾಪ್ಟನ್ ಆ್ಯರಾನ್ ಫಿಂಚ್ ಬುಮ್ರಾ ಅವರ ಮೊದಲ ಎಸೆತದಲ್ಲೆ ಎಲ್ಬಿ ಬಲೆಗೆ ಬಿದ್ರು, ಆದರೆ ಮೂರನೇ ವಿಕೆಟ್ಗೆ ಜೊತೆಗೂಡಿದ ಓಪನರ್ ಶಾರ್ಟ್ ಮತ್ತು ಸ್ಪೋಟಕ ಬ್ಯಾಟ್ಸ್ಮನ್ ಗ್ಲೇನ್ ಮ್ಯಾಕ್ಸ್ ವೆಲ್ ಟೀಂ ಇಂಡಿಯಾ ಬೌಲರ್ಸ್ಗಳ ಬೆವರಿಳಿಸಿ 86 ರನ್ಗಳ ಸೇರಿಸಿ ಪಂದ್ಯ್ಕಕೆ ತಿರುವು ನೀಡಿತು.
ಆದರೆ ನಂತರ ಬಂದ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ನಿಲ್ಲಲ್ಲಿಲ್ಲ 37 ರನ್ಗಳಿಸಿದ್ದ ಡಿ ಆರ್ಕಿ ಶಾರ್ಟ್ ಧೋನಿ ಚುರುಕಿನ ರನೌಟ್ಗೆ ಬಲಿಯಾದ್ರೆ. ಅರ್ಧ ಶತಕ ಗಳಿಸಿದ್ದ ಗ್ಲೇನ್ ಮ್ಯಾಕ್ಸ್ವೆಲ್ ಚಹಲ್ಗೆ ಬಲಿಯಾದ್ರು. ಮಿಡ್ಲ್ ಆರ್ಡರ್ನಲ್ಲಿ ಟರ್ನರ್ 0, ಕೌಲ್ಟರ್ ನೈಲ್ 4 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದ್ರು.
ಕೊನೆಯ ಓವರ್ನಲ್ಲಿ ಆಸ್ಟ್ರೇಲಿಯಾಕ್ಕೆ 16 ರನ್ ಬೇಕಿತ್ತು. ರಿಚರ್ಡ್ಸ್ ನ್ ಮತ್ತು ಕಮಿನ್ಸ್ ತಲಾ ಒಂದೊಂದು ಬೌಂಡರಿ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಆಸ್ಟ್ರೇಲಿಯಾ ತಂಡ 3 ವಿಕೆಟ್ಗಳ ಗೆಲುವು ಪಡೆಯಿತು. ಕಮಿನ್ಸ್ ಮತ್ತು ರಿಚರ್ಡ್ಸ್ನ್ ತಲ ಅಜೇಯ 76 ರನ್ ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ರು.