ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ 

ನವದೆಹಲಿ:ಮಾ-೧೫: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಹ್ಯಾಕರ್ ಗಳು ಏರ್ ಇಂಡಿಯಾ ಟ್ವಿಟ್ಟರ್ ಖಾತೆಯನ್ನು @airindiainದಿಂದ @airindiaTR. ಎಂದು ಬದಲಿದ್ದಾರೆ.

ಇಂದು ಬೆಳಿಗ್ಗೆ ಸರಣಿ ಟ್ವೀಟ್‌ಗಳು ಪ್ರಕಟಗೊಂಡ ಬೆನ್ನಲ್ಲೇ ಟ್ವಿಟರ್ ಖಾತೆ ಸೈಬರ್ ದಾಳಿಗೆ ತುತ್ತಾಗಿರುವುದು ಗೊತ್ತಾಗಿದೆ. ಆ ಪೈಕಿ ಒಂದು ಟ್ವೀಟ್‌ನಲ್ಲಿ, ‘ಕೊನೆಯ ಕ್ಷಣದ ಘೋಷಣೆ: ನಮ್ಮ ಎಲ್ಲ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ಇನ್ನು ನಾವು ಟರ್ಕಿಯ ವಿಮಾನಗಳಲ್ಲಿ ಪ್ರಯಾಣಿಸಲಿದ್ದೇವೆ’ ಎಂದು ಉಲ್ಲೇಖಿಸಲಾಗಿದೆ.

‘ಟರ್ಕಿ ಸೈಬರ್ ಆರ್ಮಿ’ ಎಂದು ಟ್ವಿಟರ್ ಖಾತೆಯಲ್ಲಿ ಪ್ರತಿಪಾದಿಸಿಕೊಂಡಿರುವ ‘ಆಯ್ಯಿಲ್‌ಡಿಜ್‌ಟ್’ ಎಂಬ ಗುಂಪು ಈ ಕೃತ್ಯ ಎಸಗಿರುವುದಾಗಿ ರಿಟ್ವೀಟ್ ಮೂಲಕ ತಿಳಿಸಿದೆ. ಜತೆಗೆ, ಟರ್ಕಿ ಪರ ಅನೇಕ ಟ್ವೀಟ್‌ಗಳನ್ನೂ ಪ್ರಕಟಿಸಿದೆ. ಆದರೆ, ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಏರ್‌ ಇಂಡಿಯಾ ಅಧಿಕಾರಿಗಳು ಇದುವರೆಗೆ ಅಧಿಕೃತವಾಗಿ ಮಾಹಿತಿ ಬಹಿರಂಗಪಡಿಸಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ