ಮುದ್ದೆಬಿಹಾಳ, ಮಾ.15-ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮನುಸೂರ ಹುಸೇನಸಾಬ ಬಾಗವಾನ (ಚೌದರಿ) (28) ಮೃತಪಟ್ಟ ಚಾಲಕ.
ಮಧ್ಯರಾತ್ರಿ ಮುದ್ದೆಬಿಹಾಳದಿಂದ ನಿಡಗುಂದಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಆಲಮಟ್ಟಿ ರಸ್ತೆಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಸಂಬಂಧ ಮುದ್ದೆಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.