ಬೆಂಗಳೂರು, ಫೆ.22- ರಿಯಲ್ ಎಸ್ಟೇಟ್ ಉದ್ಯಮಿ, ರಾಜಕಾರಣಿ ಪ್ರಭಾಕರ್ ರೆಡ್ಡಿಯಿಂದ ಯಾರಾದರೂ ವಂಚನೆ, ಅನ್ಯಾಯಕ್ಕೆ ಒಳಗಾಗಿದ್ದರೆ ನೇರವಾಗಿ ಬಂದು ಸಿಸಿಬಿಗೆ ದೂರು ನೀಡಿ ಎಂದು ಸಿಸಿಬಿ ಡಿಸಿಪಿ ಗಿರೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಭಾಕರ್ ರೆಡ್ಡಿ ಸೈಟು ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವುದು, ಒಂದೇ ಸೈಟನ್ನು ಇಬ್ಬರು, ಮೂವರಿಗೆ ಕೊಟ್ಟಿರುವುದು, ಕೆಲವರಿಗೆ ಹಣ ಹಿಂದಿರುಗಿಸದೆ ಇರುವ ಆರೋಪ ಇವರ ಮೇಲಿದೆ. ಈ ರೀತಿ ವಂಚನೆಗೊಳಗಾದವರ್ಯಾದರೂ ಇದ್ದಲ್ಲಿ ಸಿಸಿಬಿಗೆ ದೂರು ನೀಡಬಹುದು ಎಂದು ತಿಳಿಸಿದರು.
ಪ್ರಭಾಕರ್ ರೆಡ್ಡಿ ವಿರುದ್ಧ ಸಿಸಿಬಿಗೆ ದೂರುಗಳ ಸುರಿಮಳೆ ಬರುತ್ತಿದೆ. ಇದುವರೆಗೂ ರೆಡ್ಡಿ ವಿರುದ್ಧ ವಿವಿಧ ಪೋಲೀಸ್ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿದ್ದವು. ಆತನ ಬಂಧನದ ನಂತರ ಇದೀಗ ಹೆಚ್ಚಾಗಿ ದೂರುಗಳು ಬರುತ್ತಿವೆ ಎಂದು ಹೇಳಿದರು.
ನಿನ್ನೆ ಪ್ರಭಾಕರ್ ರೆಡ್ಡಿ ಬಂಧಿಸಿದ ನಂತರ ಇವರ ವಿರುದ್ಧ ಈತನಕ 25 ದೂರುಗಳು ಬಂದಿವೆ ತಿಳಿಸಿದರು.