ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ರಾಮ ಗೋಪಾಲ್ ವರ್ಮಾ ತಿರುಗೇಟು

ಮುಂಬೈ: ಪುಲ್ವಾಮಾ ಉಗ್ರರ ದಾಳಿ ಕುರಿತು ಹೇಳಿಕೆ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಎಲ್ಲಾ ಸಮಸ್ಯೆಗಳು ಮಾತುಕತೆಯಿಂದಲೆ ಬಗೆಹರಿಯುತ್ತವೆ ಎಂದಾದರೆ, ನೀವು 3 ಮದುವೆಯಾಗುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ ಹೇಳಿಕೆಗೆ ಸರಣಿ ಟ್ವೀಟ್ ಮಾಡಿರುವ ನಿರ್ದೇಶಕ ಆರ್ ಜಿವಿ, ಎಲ್ಲಾ ಸಮಸ್ಯೆಗಳು ಮಾತುಕತೆಯಿಂದ ಬಗೆಹರಿಯುವುದಾದರೇ ನೀವು 3ನೇ ಮದುವೆಯಾಗುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.

ಬುದ್ದಿಯಿಲ್ಲದ ನಮ್ಮೆಡೆಗೆ ಆರ್​ಡಿಎಕ್ಸ್​ ಹಿಡಿದು ಬರುತ್ತಿರುವ ವ್ಯಕ್ತಿಯೊಂದಿಗೆ ಹೇಗೆ ಮಾತುಕತೆ ನಡೆಸಬೇಕು ಎಂಬುದನ್ನು ನೀವು ದಯವಿಟ್ಟು ತಿಳಿಸಿಕೊಡಿ. ಚಿಂತಿಸಬೇಡಿ ನಾವು ನಿಮಗೆ ಟ್ಯೂಷನ್​ ಫೀಯನ್ನೂ ನೀಡುತ್ತೇವೆ. ನಿಮ್ಮ ದೇಶದಲ್ಲಿ ಯಾರಿದ್ದಾರೆ ಎಂಬುವುದೇ ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮದ್, ಲಷ್ಕರ್ ಎ ತೋಯಿಬಾ, ತಾಲಿಬಾನ್, ಅಲ್ ಕೈದಾ ಸಂಘಟನೆಗಳು ಪಾಕಿಸ್ತಾನದಲ್ಲಿ ಅಶ್ರಯ ಪಡೆದಿದೆ. ಈ ಬಗ್ಗೆ ಒಮ್ಮೆಯೂ ನೀವು ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ ಉಗ್ರರು ಇಲ್ಲ ಎನ್ನುವ ಹೇಳಿಕೆಯನ್ನೇ ನೀಡಿಲ್ಲ ಏಕೆ ಎಂದು ಕೇಳಿದ್ದಾರೆ.

Ram Gopal Varma slams Pak PM Imran Khan, says, ‘If dialogue could solve problem why 3 marriages?

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ