ತಿರುಪತಿ,ಮಾ.15- ಕಾಣಿಕೆ ರೂಪದಲ್ಲಿ ಸಂದಾಯವಾಗಿರುವ ಒಟ್ಟು 25 ಕೋಟಿ ರೂ.ಮೌಲ್ಯದ 500 ಹಾಗೂ 1000 ಮುಖಬೆಲೆಯ ಹಳೆ ನೋಟುಗಳನ್ನು ಹೊಸ ಕರೆನ್ಸಿಗೆ ಬದಲಾವಣೆ ಮಾಡಿಕೊಡಿ ಎಂದು ತಿರುಪತಿ ತಿರುಮಲ ದೇವಸ್ಥಾನ ಆರ್ಬಿಐನ್ನು ಕೋರಿಕೊಂಡಿದೆ. 2016 ರ ನವೆಂಬರ್ 8 ರಂದು ಸರ್ಕಾರ ನೋಟ್ ಬ್ಯಾನ್ ಮಾಡಿತ್ತು. ನೋಟ್ ಬ್ಯಾನ್ ಆದ ನಂತರ ಇಲ್ಲಿಯವರೆಗೂ 25 ಕೋಟಿ ರೂ. ಗಳಷ್ಟು ಹಳೇ ನೋಟುಗಳನ್ನು ಭಕ್ತರು ತಿಮ್ಮಪ್ಪನ ಹುಂಡಿಗೆ ಹಾಕಿದ್ದಾರೆ. ಆದರೆ, ಈ ಹಳೆನೋಟುಗಳನ್ನು ವಿಲೇಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸನೋಟುಗಳನ್ನು ನೀಡಬೇಕೆಂದು ಆರ್ಬಿಗೆ ಟಿಡಿಡಿ ಕೇಳಿಕೊಂಡಿದೆ.