ವಿದ್ಯುನ್ಮಾನ ಮಂತಯಂತ್ರಗಳಿಗೆ ಬದಲಾಗಿ ಮತ ಪತ್ರಗಳನ್ನು ಬಳಸುವಂತೆ ರಾಜ್ಯ ಮುಖ್ಯಚುನಾವಣಾಧಿಕಾರಿಗಳಿಗೆ ಜೆಡಿಎಸ್ ಮನವಿ

 

ಬೆಂಗಳೂರು, ಮಾ.15-ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮಂತಯಂತ್ರಗಳಿಗೆ ಬದಲಾಗಿ ಮತ ಪತ್ರಗಳನ್ನು ಬಳಸುವಂತೆ ಜೆಡಿಎಸ್ ರಾಜ್ಯ ವಕ್ತಾರ ಡಾ.ವಿ.ರಾಘವೇಂದ್ರರಾವ್ ರಾಜ್ಯ ಮುಖ್ಯಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಹಲವು ಸಂದೇಹಗಳನ್ನು ರಾಜಕೀಯ ಪಕ್ಷಗಳು ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮತಪತ್ರ ಬಳಸುವಂತೆ ಕೋರಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರಿಗೆ ಮನವಿ ಪತ್ರವನ್ನು ಇಂದು ನೀಡಿದ್ದಾರೆ.

ಮತ ಯಂತ್ರಗಳಿಗೆ ವಿವಿ ಪ್ಯಾಟ್ ಅಳವಡಿಸಿದರೂ ಸಹ ವೀಕ್ಷಣೆಗೆ ಕೇವಲ 7 ಸೆಕೆಂಡ್ ಮಾತ್ರ ಅವಕಾಶವಿರುವುದರಿಂದ ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮತ ಪತ್ರಗಳ ಬಳಸುವಂತೆ ತಿಳಿಸಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳು ಹಾಗೂ ಹಲವಾರು ಸಂದೇಹಗಳು ಉದ್ಭವಿಸಿರುವ ಜೊತೆಗೆ ವಿವಿ ಪ್ಯಾಟ್ ಯಂತ್ರದಿಂದಲೂ ಅಷ್ಟೇನೂ ಉಪಯೋಗವಾಗಲಾರದು ಎಂಬ ಕಾರಣಕ್ಕಾಗಿ ಮತಪತ್ರಗಳನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಳಸಲು ಅವಕಾಶ ನೀಡುವಂತೆ ಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ