ನವದೆಹಲಿ: ಭಯೋತ್ಪಾದನೆಯೇ ಪಾಕಿಸ್ತಾನದ ಕೆಲಸ. ಪಾಕ್ ಜತೆ ಮಾತುಕತೆ ಸಮಯ ಮುಗಿದುಹೋಗಿದೆ. ಇನ್ನೇನಿದ್ದರು ಉಗ್ರರ ವಿರುದ್ಧದ ಕಾರ್ಯಾಚರಣೆ ಮಾತ್ರ ಮುಂದುವರೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾರತದ ಪ್ರವಾಸಕ್ಕೆ ಆಗಮಿಸಿರುವ ಆರ್ಜೆಂಟೀನಾದ ಅಧ್ಯಕ್ಷ ಮೌರಿಸಿಯೊ ಮ್ಯಾಕ್ರಿ ಭೇಟಿ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಪುಲ್ವಾಮಾ ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನದೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಅವಕಾಶ ಮುಗಿದುಹೋಗಿದೆ. ಇನ್ನೇನಿದ್ದರು ಕಾರ್ಯಾಚರಣೆ ಮೂಲಕ ಉಗ್ರರ ದಮನ. ಭಯೋತ್ಪಾದನೆಯನ್ನು ಹಾಗೂ ಉಗ್ರವಾದದ ಬೆಂಬಲಿಗರನ್ನು ಹತ್ತಿಕ್ಕಲು ಇಡೀ ವಿಶ್ವವೇ ಒಂದಾಗಿ ಹೋರಾಟ ನಡೆಸಬೇಕಿದೆ. ಉಗ್ರರ ಧಮನಕ್ಕೆ ಎಲ್ಲರೂ ಸಹಕಾರ ನೀಡುವಂತೆ ಪ್ರಧಾನಿ ಮೋದಿ ಕರೆ ನೀಡಿದರು.
ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ಕೂಡ ಭಯೋತ್ಪಾದಕರಿಗೆ ಬೆಂಬಲ ನೀಡಿದಂತೆ ಎಂದ ಪ್ರಧಾನಿ ಭಯೋತ್ಪಾದನೆಯ ನಿಗ್ರಹಕ್ಕೆ ಸಂಘಟಿತ ಹೋರಾಟ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಭಾರತ ಜಿ20 ರಾಷ್ಟ್ರಗಳ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ಹ್ಯಾಂಬರ್ಗ್ ನಾಯಕರು ಅನುಮೋದಿಸಿರುವ 11 ಅಂಶಗಳ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರುವ ಸಮಯ ಇದಾಗಿದೆ. ಆದ್ದರಿಂದ, ಭಾರತ ಮತ್ತು ಆರ್ಜೆಂಟೀನ ಭಯೋತ್ಪಾದನೆ ನಿಗ್ರಹ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಲಿರುವುದಾಗಿ ತಿಳಿಸಿದರು.
Pulwama attack showed time for talks over, world will have to act on terror: PM Modi