ಬೆಂಗಳೂರು, ಫೆ.15-ಹುತಾತ್ಮರಾಗಿರುವ ವೀರಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರು, ರಾಜ್ಯಸರ್ಕಾರದಿಂದ ಗುರು ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಘೋಷಿಸಿದ್ದಾರೆ.
ಗುರು ಅವರ ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗ ಹಾಗೂ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿದ್ದಾರೆ.ಪಾರ್ಥಿವ ಶರೀರ ಗ್ರಾಮಕ್ಕೆ ತರುವ ಬಗ್ಗೆ ಇಂದು ಮಾಹಿತಿ ಸಿಗಲಿದೆ.ನಂತರ ಎಲ್ಲ ಸರ್ಕಾರಿ ಗೌರವದೊಂದಿಗೆ ವೀರಯೋಧನಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಈಗಾಗಲೇ ಕುಟುಂಬದವರನ್ನು ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ.ನಾನೂ ಸಹ ಅಲ್ಲಿನ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಸ್ಥಳಕ್ಕೂ ಹೋಗಲಿದ್ದೇನೆ ಎಂದರು.
ಇದೊಂದು ಹೇಡಿಗಳ ಕೃತ್ಯ.ಸೇನೆಯಿಂದ ಸರಿಯಾದ ಪ್ರತ್ಯುತ್ತರ ನೀಡಬೇಕಿದೆ.ಪ್ರಧಾನಿಯವರು ಭಯೋತ್ಪಾದನೆಯನ್ನು ಸದೆಬಡಿಯಬೇಕಿದೆ ಎಂದು ಆಗ್ರಹಿಸಿದರು.