ಲಕ್ನೋ, ಫೆ.15- ಉಗ್ರರ ದಾಳಿಯಿಂದ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಪೈಕಿ 12 ಮಂದಿಯ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ತಲಾ 25 ಲಕ್ಷ ರೂ.ಗಳ ಎಕ್ಸ್ಗ್ರೇಷಿಯಾವನ್ನು ಪ್ರಕಟಿಸಿದೆ.
ಜತೆಗೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಮತ್ತು ಯೋಧರ ತವರೂರನ್ನು ಸಂಪರ್ಕಿಸುವ ರಸ್ತೆಗೆ ಮೃತಪಟ್ಟ ಯೋಧರ ಹೆಸರನ್ನು ನಾಮಕರಣ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ.
ಯೋಧರ ಅಂತ್ಯಕ್ರಿಯೆ ಸಂದರ್ಭದಲ್ಲಿ ಆಯಾ ಜಿಲ್ಲೆಯ ಸಚಿವರು, ಜನಪ್ರತಿನಿಧಿಗಳು ಖುದ್ದಾಗಿ ಹಾಜರಿದ್ದು ಗೌರವ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.
ನಿನ್ನೆ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಉತ್ತರ ಪ್ರದೇಶದ 12 ಮಂದಿ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ.
ಆದೇಶ್ಕುಮಾರ್ ಯಾದವ್ (ಚಂದುಳ್ಳಿ), ಪಂಕಜ್ಕುಮಾರ್ ತ್ರಿಪಾಠಿ (ಮಾಹರಾಜ್ ಗಂಜ್), ಅಮಿತ್ಕುಮಾರ್ (ಶಮ್ಲಿ), ಪ್ರದೀಪ್ಕುಮಾರ್ (ಶಮ್ಲಿ), ವಿಜಯ್ಕುಮಾರ್ ಮೌರ್ಯ (ಡಿಯೋರಿಯಾ), ರಾಮ್ವಜೀಲ್ (ಮಣಿಪುರಿ), ಮಹೇಶ್ಕುಮಾರ್ (ಅಲಹಾಬಾದ್), ರಮೇಶ್ಯಾದವ್ (ವಾರಣಾಸಿ), ಕುಶಾಲ್ಕುಮಾರ್ ರಾವತ್ ( ಆಗ್ರಾ), ಪ್ರದೀಪ್ಸಿಂಗ್ (ಕಣ್ಣುಜ್), ಶಾಮ್ಬಾಬ್ (ಖಾನಾಪುರ್), ಅಜಿತ್ಕುಮಾರ್ ಅಜಾದ್ (ಉನಾವ್) ಉತ್ತರ ಪ್ರದೇಶದ ಹುತಾತ್ಮ ಯೋಧರು.