ನವದೆಹಲಿ, ಫೆ.15- ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಅರಬ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ಸಚಿವಾಲಯ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದು, ಘಟನೆ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಅರಬ್ ಒಕ್ಕೂಟ ಭಾರತದ ಬೆಂಬಲಕ್ಕಿದೆ. ಭಾರತೀಯರ ಶಾಂತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಕ್ತಪಾತ ಮತ್ತು ತೀವ್ರವಾದವನ್ನು ಹತ್ತಿಕ್ಕಲು ನಮ್ಮೆಲ್ಲ ಸಹಕಾರ ಇರುವುದಾಗಿ ಭರವಸೆ ನೀಡಿದೆ.