ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಗೆ ಸಮರ್ಪಕವಾಗಿ ಸರ್ಕಾರಿ ಬಸ್ ಸಂಚರಿ ಸುತ್ತಿಲ್ಲ ಎಂದು ಗ್ರಾಮಸ್ಥರು ಕಾಲೇಜು ವಿದ್ಯಾರ್ಥಿಗಳು ಇಂದು ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಭಾಗದಿಂದ ದಿನ ನಿತ್ಯ ನಗರಕ್ಕೆ ತೆರಳುವ ಕಾರ್ಮಿಕರು ಕಾಲೇಜು ವಿದ್ಯಾರ್ಥಿಗಳಿಗೆ ಸಂಚರಿಸಲು ಸರ್ಕಾರಿ ಬಸ್ಗಳು ಸಮಯಕ್ಕೆ ಸರಿಯಾಗಿ ಸಂಚರಿಸುವುದಿಲ್ಲ ಸರ್ಕಾರಿ ಬಸ್ ಗಳನ್ನು ನಂಬಿಕೊಂಡಿರುವ ಪಾಸ್ ಹೊಂದಿರುವ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಕಳೆದ ಎರಡು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಬಂದ ಕೆಎಸ್ಆರ್ಟಿಸಿ ಅಧಿಕಾರಿಗಳು ಇನ್ನು ಮುಂದೆ ಇಂತಹ ತೊಂದರೆಯಾಗದಂತೆ ಹಾಗೂ ಸಮರ್ಪಕವಾಗಿ ಬಸ್ ಗಳ ಸಂಚಾರವನ್ನು ನೀಡುವಂತೆ ತಿಳಿಸಿದ್ದರು ಆದರೆ ನೆನ್ನೆ ಮಧ್ಯಾಹ್ನ ನಗರದಿಂದ ತೂಬಗೆರೆಗೆ ಆಗಮಿಸ ಬೇಕಿದ್ದ ಬಸ್ ಬರಲಿಲ್ಲ ಈ ಬಗ್ಗೆ ಕೆಎಸ್ಸಾರ್ಟಿಸಿ ಸಂಚಾರ ನಿಯಂತ್ರಕರನ್ನು ಕೇಳಿದರೆ ತೂಬಗೆರೆ ಗೆ ತೆರಳುವ ಬಸ್ಸು ಬೇರೆ ಕಡೆಗೆ ಹೋಗಿದೆ ಎಂದು ಹಾರಿಕೆ ಉತ್ತರ ನೀಡಿ ನಿಮಗೆ ಬಸ್ ಬೇಕೆಂದರೆ ಯಾವುದಾದರೂ ಬಸ್ಸನ್ನು ಕರೆದುಕೊಂಡು ಹೋಗಿ ಎಂದು ತೂಬಗೆರೆ ನಾಮಫಲಕ ವಿರುವ ಬಸ್ಸಿನ ಬೋರ್ಡನ್ನು ವಿದ್ಯಾರ್ಥಿಗಳ ಕೈಗೆ ಇಟ್ಟಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.