ನವದೆಹಲಿ: ದಿಲ್ಲಿ ಆಡಳಿತದಲ್ಲಿ ಅಲ್ಲಿಯ ಸರಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಪೀಠ ತೀರ್ಪು ನೀಡಿದೆ. ಅತ್ಯಂತ ಪ್ರಮುಖ ಭಾಗವಾದ ಭ್ರಷ್ಟಾಚಾರ ವಿರೋಧಿ ತನಿಖೆಗಳ ಅಧಿಕಾರವು ದಿಲ್ಲಿ ಲೆಫ್ಟಿನೆಂಟ್ ರಾಜ್ಯಪಾಲರ ಕೈಯಲ್ಲೇ ಇರಲಿದೆ. ಹಾಗೆಯೇ, ಕೇಜ್ರಿವಾಲ್ ಸರಕಾರ ಬಲವಾಗಿ ಒತ್ತಾಯಿಸುತ್ತಿರುವ ಪೊಲೀಸ್ ಇಲಾಖೆಯ ನಿಯಂತ್ರಣ ಕೂಡ ಎಲ್ಜಿ ಅವರ ಬಳಿಯೇ ಇರಲಿದೆ. ವಿವಿಧ ಇಲಾಖೆಗಳ ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕಿಂತ ಉನ್ನತ ಹುದ್ದೆಯ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಅಧಿಕಾರವೂ ಎಲ್ಜಿ ಅವರ ಬಳಿಯೇ ಇರಬೇಕು ಎಂದು ನ್ಯಾ| ಎ.ಕೆ. ಸಿಕ್ರಿ ಮತ್ತು ನ್ಯಾ| ಅಶೋಕ್ ಭೂಷಣ್ ಅವರಿರುವ ದ್ವಿಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.
ಇಬ್ಬರೂ ನ್ಯಾಯಮೂರ್ತಿಗಳು ಬಹುತೇಕ ಒಂದೇ ಅಭಿಪ್ರಾಯಕ್ಕೆ ಬಂದರಾದರೂ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇವತ್ತು ಆರು ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಅದರಲ್ಲಿ ನಾಲ್ಕು ಎಲ್ಜಿ ಪರವಾಗಿದ್ದರೆ, ಇನ್ನೆರಡು ದಿಲ್ಲಿ ಸರಕಾರದ ಪರವಾಗಿವೆ. ಭ್ರಷ್ಟಾಚಾರ ವಿರೋಧಿ ಸಂಸ್ಥೆ, ಗ್ರೇಡ್ 1 ಮತ್ತು 2 ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆ, ಕಮಿಷನ್ ಆಫ್ ಇನ್ಕ್ವೈರಿ ಇವು ಎಲ್ಜಿ ಮೂಲಕ ಕೇಂದ್ರ ಸರಕಾರದ ನಿಯಂತ್ರಣದಲ್ಲೇ ಇರಲಿವೆ ಎಂದು ಸುಪ್ರೀಂ ನ್ಯಾಯಪೀಠ ತೀರ್ಮಾನಕ್ಕೆ ಬಂದಿವೆ.
ವಿದ್ಯುತ್ ಸುಧಾರಣೆ ಕಾಯ್ದೆಯ ಅಧಿಕಾರವನ್ನು ದಿಲ್ಲಿ ಸರಕಾರಕ್ಕೆ ನೀಡಲಾಗಿದೆ. ಕೃಷಿ ಭೂಮಿಯ ಕನಿಷ್ಠ ದರದ ಪರಿಷ್ಕರಣೆಯ ಅಧಿಕಾರವು ದಿಲ್ಲಿ ಸರಕಾರಕ್ಕೆ ಇದೆಯಾದರೂ ಎಲ್ಜಿ ಅವರು ಅಗತ್ಯಬಿದ್ದಲ್ಲಿ ರಾಷ್ಟ್ರಪತಿಗಳ ಗಮನಕ್ಕೆ ತರುವ ಅಧಿಕಾರ ಹೊಂದಿರುತ್ತಾರೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಆದರೆ, ಸೇವೆಗಳ ವಿಚಾರದಲ್ಲಿ ಇಬ್ಬರು ನ್ಯಾಯಮೂರ್ತಿಗಳು ತದ್ವಿರುದ್ಧ ತೀರ್ಪು ನೀಡಿದ್ದಾರೆ. ನ್ಯಾ| ಎಕೆ ಸಿಕ್ರಿ ಅವರು ಕೇಂದ್ರ ಸರಕಾರದ ಪರ ತೀರ್ಪು ಕೊಟ್ಟರೆ, ನ್ಯಾ| ಅಶೋಕ್ ಭೂಷಣ್ ಅವರು ದಿಲ್ಲಿ ಸರಕಾರಕ್ಕೆ ಅಧಿಕಾರ ಇರಬೇಕೆಂದು ಹೇಳಿದರು. ಈ ಒಂದು ವಿಚಾರದಲ್ಲಿ ದ್ವಿಸದಸ್ಯ ನ್ಯಾಯಪೀಠವು ಒಮ್ಮತಕ್ಕೆ ಬರಲಾಗಲಿಲ್ಲ. ಹೀಗಾಗಿ, ಸರ್ವಿಸ್ ಅಧಿಕಾರ ಯಾರಿಗೆ ಸಿಗಬೇಕೆಂಬುದನ್ನು ತ್ರಿದಸ್ಯ ಪೀಠವೊಂದು ನಿರ್ಧರಿಸಲಿದೆ.
ಕಳೆದ ವರ್ಷ ಆಡಳಿತಾತ್ಮಕ ವಿಚಾರದಲ್ಲಿ ರಾಷ್ಟ್ರ ರಾಜಧಾನಿಯ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಅನಿಲ್ ಬೈಜಲ್ ನಡುವೆ ಉಂಟಾದ ಬಿಕ್ಕಟ್ಟಿನ ಕುರಿತು ದೆಹಲಿ ಹೈ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು.
ಕಳೆದ ವರ್ಷ ಈ ಕುರಿತು ಅರ್ಜಿ ಆಲಿಸಿದ ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠ ದೆಹಲಿಗೆ ರಾಜ್ಯದ ಸ್ಥಾನ ನೀಡಲು ಸಾಧ್ಯವಿಲ್ಲ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ನೀಡಲಾಗಿರುವ ವಿಶೇಷಾಧಿಕಾರವನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಚಲಾಯಿಸಬಹುದೇ ಹೊರತು ಆ ಅಧಿಕಾರವನ್ನು ಸಾಮಾನ್ಯ ಸಂದರ್ಭಗಳಲ್ಲಿ ಪ್ರಯೋಗಿಸುವಂತಿಲ್ಲ. ರಾಜ್ಯದ ನಿಜವಾದ ಅಧಿಕಾರವಿರುವುದು ಮುಖ್ಯಮಂತ್ರಿ ಗಳಿಗೆ ಎಂದು ತೀರ್ಪು ನೀಡಿತು.
ರಾಜ್ಯದ ಭೂಮಿ, ಕಾನೂನು ವ್ಯವಸ್ಥೆ, ಪೊಲೀಸ್ ಪ್ರಕರಣದಲ್ಲಿ ಲೆಫ್ಟಿನೆಂಟ್ ಸ್ವತಂತ್ವವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಕೂಡ ತಿಳಿಸಿತು. ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಅಧಿಕಾರವಿಲ್ಲ. ಅಲ್ಲದೆ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸುವುದೂ ಸರಿಯಲ್ಲ ಎಂದು ಸಾಂವಿಧಾನಿಕ ಪೀಠ ತಿಳಿಸಿತು.
ಆ ಸಮಯದಲ್ಲಿ ಈ ವಿವಾದದ ಕುರಿತು ಪ್ರತ್ಯೇಕ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿರಲಿಲ್ಲ. ಅಲ್ಲದೇ ಇಬ್ಬರು ನ್ಯಾಯಾಧೀಶರು ಈ ಪ್ರಕರಣವನ್ನು ಆಲಿಸಲಿದ್ದಾರೆ ಎಂದು ತಿಳಿಸಿತು. ಈ ಪ್ರಕರಣ ಇಂದು ಸುಪ್ರೀಂ ಮುಂದೆ ಇದೆ.
ಆ ಸಮಯದಲ್ಲಿ, ಉದ್ಭವಿಸಿದ ಸಮಸ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್ ಬೇರೆ ನಿರ್ಧಾರವನ್ನು ನೀಡಿಲ್ಲ. ನಿಯಮಿತವಾಗಿ ಎರಡು ನ್ಯಾಯಾಧೀಶರ ನ್ಯಾಯಾಧೀಶರು ಈ ಪ್ರಕರಣವನ್ನು ಕೇಳುತ್ತಾರೆ ಎಂದು ಹೇಳಿತು. ಈ ತೀರ್ಪು ಮತ್ತಷ್ಟು ಗೊಂದಲ ಸೃಷ್ಟಿಸಿತು. ಈ ಕುರಿತು ಮತ್ತಷ್ಟು ಸ್ಪಷ್ಟವಾಗಿ ತಿಳಿಸುವಂತೆ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಕದತಟ್ಟಿದ್ದರು. ಈಗ ಈ ಪ್ರಕರಣಗಳು ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿದೆ.ಈ ಕುರಿತು ನ್ಯಾ.ಎಕೆ ಸಿಕ್ರಿ ಹಾಗೂ ನ್ಯಾ. ಅಶೋಕ್ ಭೂಷನ್ ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿದ್ದಾರೆ.