ಬೆಂಗಳೂರು, ಫೆ.11- ದೀನದಯಾಳ್ ಅವರು ಭಾರತೀಯ ಜನಸಂಘದ ಸ್ಥಾಪನೆಯ ಮೂಲಕ ತಮ್ಮ ದೂರದರ್ಶಿತ್ವದ ನಾಯಕತ್ವ ಗುಣವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ ರಾವ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ದೀನದಯಾಳ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಅವರು ಏಕಾತ್ಮ ಮಾನವತಾವಾದವು ಇಂದು ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಎಂದು ಸ್ಮರಿಸಿದರು.
ಬಿಜೆಪಿಯು ಈ ದಿನವನ್ನು ಸಮರ್ಪಣಾ ದಿನವನ್ನಾಗಿ ಆಚರಿಸುತ್ತಿದ್ದು ದೇಶದೆಲ್ಲೆಡೆ ಇಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು 5ರೂ.ಗಳಿಂದ 1000ರೂ.ಗಳ ವರೆಗೆ ನಮೋ ಆಪï ಮೂಲಕ ದೇಣಿಗೆ ನೀಡುವ ಮೂಲಕ ಶ್ರೀ ದೀನದಯಾಳï ಅವರ ಬಲಿದಾನವನ್ನು ವಿಶಿಷ್ಟ ವಾಗಿ ಆಚರಿಸಿದರು.
ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ.ಸಂತೋಷ,ರಾಜ್ಯ ಬಿಜೆಪಿ ಖಜಾಂಚಿ ಶ್ರೀ ಸುಬ್ಬಣ್ಣ ಮತ್ತು ಇತರ ಕಾರ್ಯಕರ್ತರು ಶ್ರೀ ದೀನದಯಾಳ ಉಪಾಧ್ಯಾಯ ಅವರಿಗೆ ಗೌರವ ನಮನ ಸಲ್ಲಿಸಿದರು.