ಪುಣೆ, ಫೆ.11-ಜಾತಿವಾದವನ್ನು ಸಮಾಜದಿಂದ ಕಿತ್ತೊಗೆಯಬೇಕು ಎಂದು ಕರೆ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವ ನಿತಿಕ್ ಗಡ್ಕರಿ ಜಾತಿ ಬಗ್ಗೆ ಮಾತನಾಡುವವರನ್ನು ನಾನು ಥಳಿಸುತ್ತೇನೆ ಎಂದು ಗುಡುಗಿದ್ದಾರೆ.
ಚಿಂಚವಾಡ, ಪಿಂಪ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ನಾನು ಯಾವುದೇ ಜಾತಿಯ ಬಗ್ಗೆ ನಂಬುವುದಿಲ್ಲ, ನಿಮ್ಮ ಸ್ಥಳದಲ್ಲಿ ಎಷ್ಟು ಜಾತಿಗಳಿವೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ, ನನ್ನ ಬಳಿ ಯಾರಾದರೂ ಜಾತಿಯ ಬಗ್ಗೆ ಮಾತನಾಡಲು ಬಂದರೇ ಅವರಿಗೆ ಸರಿಯಾಗಿ ಶಾಸ್ತಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೋಮುವಾದದಿಂದ ಹಾಗೂ ಜಾತಿವಾದವನ್ನು ಸಮಾಜದಿಂದ ಮುಕ್ತವಾಗಬೇಕು. ಇದೆಲ್ಲಾವನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಹೇಳಿದ್ದರು.
ಕೋಮುವಾದ ಹಾಗೂ ಜಾತಿವಾದ ಮುಕ್ತ ಸಮಾಜ ಸೃಷ್ಟಿಯಾಗಬೇಕು, ಸಮಾಜದಲ್ಲಿ ಬಡವರ ಮತ್ತು ಶ್ರೀಮಂತರ ನಡುವೆ ತಾರತಮ್ಯ ಇದೆ ಎಂದು ಗಡ್ಕರಿ ಹೇಳಿದ್ದಾರೆ. ಬಡವರು ಹಾಗೂ ವಿಧೇಯತೆ ಎಂಬುದು ದೇವರ ಹಾಗೆ ಅವರಿಗೆ ಸೇವೆ ಮಾಡಬೇಕು, ಅವರಿಗೆ ಊಟ ಹಾಗೂ ಬಟ್ಟೆ ನೀಡಬೇಕು ಎಂದು ಹೇಳಿದ್ದಾರೆ.