ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ಕಮಾಲ್ ಮಾಡಿದ್ದಾರೆ. ಅದು ಬ್ಯಾಟಿಂಗ್ನಿಂದ ಅಲ್ಲ ಬದಲಿಗೆ ಸ್ಟಂಪಿಂಗ್ ನಿಂದ ಅನ್ನೋದೇ ವಿಷಯ .
ಮಿಸ್ಟರ್ ಕೂಲ್ ಧೋನಿ ಕಿವೀಸ್ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ಫ್ಲಾಪ್ ಪರ್ಫಾಮನ್ಸ್ ಕೊಟ್ರು. ಆದ್ರೆ ವಿಕೆಟ್ ಕಿಂಪಿಂಗ್ನಲ್ಲಿ ಮಾತ್ರ ಸಖತ್ ಇಂಪ್ರೆಸ್ ಮಾಡಿದ್ದಾರೆ.
ಹ್ಯಾಮಿಲ್ಟನ್ನಲ್ಲಿ ವೇಗದ ಸ್ಟಂಪಿಂಗ್ ಮಾಡಿದ್ರು ಧೋನಿ
ನಿನ್ನೆ ಕಿವೀಸ್ ವಿರುದ್ಧ 300ನೇ ಟಿ20 ಪಂದ್ಯ ಆಡಿದ ರಾಂಚಿ ಱಂಬೊ ವಿಕೆಟ್ ಕೀಪಿಂಗ್ನಲ್ಲಿ ಮತ್ತೋಮ್ಮೆ ಮ್ಯಾಜಿಕ್ ಮಾಡಿದ್ರು. ಸಾಲಿಡ್ ಓಪನಿಂಗ್ ಕೊಟ್ಟು ಅರ್ಧ ಶತಕದತ್ತ ಮುನ್ನುಗುತ್ತಿದ್ದ ಓಪನರ್ ಟಿಮ್ ಸೀಫರ್ಟ್ ಅವರನ್ನ ಧೋನಿ ಸೂಪರ್ರಾಗಿ ಸ್ಟಂಪ್ ಔಟ್ ಮಾಡಿದ್ರು. ವಿಷಯ ಅಂದ್ರೆ ಧೋನಿ 0.099 ಸೆಕೆಂಡುಗಳಲ್ಲಿ ಸ್ಟಂಪ್ ಮಾಡಿದ್ರು.
ಈ ಹಿಂದೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಬ್ಯಾಟ್ಸ್ಮನ್ ಕಿಮೋ ಪೌಲ್ ಅವರನ್ನ 00.08 ಸೆಕೆಂಡುಗಳಲ್ಲಿ ಸ್ಟಂಪ್ ಔಟ್ ಮಾಡಿ ದಾಖಲೆ ಬರೆದಿದ್ರು.
ವೆಲ್ಲಿಂಗ್ಟ್ನ ಏಕದಿನ ಪಂದ್ಯ ಗೆಲ್ಲಿಸಿಕೊಟ್ಟಿದ್ದ ಮಾಹಿ
ಚಾಂಪಿಯನ್ ಪ್ಲೇಯರ್ ಮಾಹಿ ನಿನ್ನೆ ಮಾತ್ರವಲ್ಲ ಇದಕ್ಕೂ ಮುನ್ನ ವೆಲ್ಲಿಂಗ್ಟನ್ ನಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ ಕಿವೀಸ್ ಬ್ಯಾಟ್ಸ್ಮನ್ ಜೇಮ್ಸ್ ನಿಶಾಮ್ ಅವರನ್ನ ರನೌಟ್ ಮಾಡಿ ದೊಡ್ಡ ಖಿತಿisಣ ಒಟ್ಟು ಪಂದ್ಯವನ್ನ ಗೆಲ್ಲಿಸಿಕೊಟ್ಟಿದ್ರು. ಧೋನಿಯ ಚಾಣಾಕ್ಷತನವನ್ನ ನೋಡಿ ಐಸಿಸಿ ಧೋನಿ ಸ್ಟಂಪ್ ಹಿಂದೆ ಇರುವಾಗ ಕ್ರೀಸ್ ಬಿಡಬೇಡಿ ಎಂದು ಟ್ವೀಟ್ ಮಾಡಿತ್ತು.
ಇಷ್ಟೆ ಅಲ್ಲ ಕೇನ್ ವಿಲಿಯಮ್ಸನ್ ಪಡೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ರಾಸ್ ಟೇಲರ್ ಅವರನ್ನ ವೇಗವಾಗಿ ಸ್ಟಂಪ್ ಮಾಡಿ ಎಲ್ಲರನ್ನು ಅಚ್ಚರಿ ಪಡಿಸಿದ್ದರು.
ಒಟ್ಟಾರೆ ಬ್ಯಾಟ್ನಿಂದ ಸೌಂಡ್ ಮಾಡದಿದ್ದರೂ ಧೋನಿ ವಿಕೆಟ್ ಕೀಪಿಂಗ್ ನಲ್ಲಿ ಚಾಣಾಕ್ಷತನ ತೋರಿಸಿ ತಮ್ಮ ಸಾಮರ್ಥ್ ಏನೆಂಬುದನ್ನ ತೋರಿಸಿದ್ದಾರೆ.