ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ಪಂಚಿಂಗ್ ಬ್ಯಾಗ್. ಇಂತಹ ಮುಖ್ಯಮಂತ್ರಿಯಿಂದ ರಾಜ್ಯದ ಅಭಿವೃದ್ಧಿಯನ್ನು ಹೇಗೆ ನಿರೀಕ್ಷಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸಮ್ಮಿಶ್ರ ಸರ್ಕಾರದ ಇಂದಿನ ಸ್ಥಿತಿಯ ಬಗ್ಗೆ ಲೇವಡಿ ಮಾಡಿದರು.
ಹುಬ್ಬಳ್ಳಿಯ ಗಬ್ಬೂರು ಬಳಿಯ ವಿಜಯ ಸಂಕಲ್ಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಬೃಹತ್ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾ ಮಿ ಈಗ ಪಂಚಿಂಗ್ ಬ್ಯಾಗ್ ಆಗಿದ್ದಾರೆ. ಅವರು ಕೇವಲ ಅಳುವ ಮುಖ್ಯಮಂತ್ರಿಯಾಗಿ ಬಿಟ್ಟಿದ್ದಾರೆ. ಕಾಂಗ್ರೆಸ್ನವರು ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರೆ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ತಾನೊಬ್ಬ ಅಸಹಾಯಕ ಮುಖ್ಯಮಂತ್ರಿ ಎಂದು ಅಳುತ್ತಿದ್ದಾರೆ. ರಾಜ್ಯದ ಉಸ್ತುವಾರಿ ಯಾರೆಂದು ಗೊತ್ತಿಲ್ಲಘಿ, ಯಾರು ಸರ್ಕಾರ ನಡೆಸುತ್ತಿದ್ದಾರೆಂಬ ಬಗ್ಗೆ ಗೊಂದಲವಿದೆ. ಇಂತಹ ಮುಖ್ಯಮಂತ್ರಿಯಿಂದ ಪ್ರಜಾಪ್ರಭುತ್ವದ ಯಾವುದೇ ನೀತಿಗಳು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಮಾರ್ಮಿಕವಾಗಿ ರಾಜ್ಯದ ಮೈತ್ರಿ ಸರ್ಕಾರವನ್ನು ತಿವಿದರು.
ಸದ್ಯ ಕರ್ನಾಟಕದ ರಾಜಕಾರಣದಲ್ಲಿನ ಬದಲಾವಣೆಗಳ ಅನುಭವ ನನಗೆ ಆಗಿದೆ. ಹೀಗಾಗಿ ರಾಜ್ಯದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿವೆ. ಬಿಜೆಪಿ ವರ್ತಮಾನದ ಜೊತೆಗೆ ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರುಗಳು ಸ್ವಾರ್ಥಪರ ಚಿಂತನೆಗಳ ಸಾಭಲ್ಯತೆಗೆ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಶ್ರೀಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಇಂತಹ ಸರ್ಕಾರವನ್ನು ಆದಷ್ಟು ಬೇಗ ಕಿತ್ತೆಸೆಯಬೇಕು ಎಂದರು.
ಕರ್ನಾಟಕದಲ್ಲಿ ಭೀರಕ ಬರವಿದೆ. ಬರದಿಂದ ನಾಗರಿಕರು, ಜನ-ಜಾನುವಾರುಗಳು ತತ್ತರಿಸಿ ಹೋಗಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಬರ ನಿರ್ವಹಣೆಯಂತಹ ಕಾರ್ಯಕ್ಕೆ ಮುಂದಾಗಿಲ್ಲ. ಬದಲಾಗಿ ವಿಶ್ವಾಸವಿಲ್ಲದ ಶಾಸಕರನ್ನು ಕೂಡಿ ಹಾಕಿ, ಕುರ್ಚಿ ಆಸೆಗಾಗಿ ಪರಸ್ಪರ ಬಡಿದಾಡಿಕೊಳ್ಳುವಂತೆ ಮಾಡಿದೆ. ಅದರಲ್ಲೂ ಕರ್ನಾಟಕದ ಮುಖ್ಯಮಂತ್ರಿಗಳು ಅಳುವುದನ್ನು ರೂಢಿಸಿಕೊಂಡಿದ್ದಾರೆ. ಪ್ರತಿಯೊಂದಕ್ಕೂ ಅಳುತ್ತಾರೆ. ಇಂತಹ ಮುಖ್ಯಮಂತ್ರಿಯಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಸೇರಿದ್ದ ಲಕ್ಷಾಂತರ ಜನಸ್ತೋಮವನ್ನು ಪ್ರಶ್ನಿಸಿದರು.
ದೇಶದ ಬಡ ಜನರಿಗೆ 73 ಲಕ್ಷ ಸದಢ ಮನೆಗಳನ್ನು ಕೊಡುತ್ತಿದ್ದೇವೆ. ನಗರದ ಬಡವರು ಅಥವಾ ಮಧ್ಯಮ ವರ್ಗದವರ ಅಭಿವದ್ಧಿ ಮಾಡುತ್ತಿದ್ದೇವೆ. ಎಲ್ಲರ ಜೊತೆ ಎಲ್ಲರ ಅಭಿವದ್ಧಿ ನಮ್ಮ ಧ್ಯೆಯ. ಕಾಂಗ್ರೆಸ್ನವರು 45 ವರ್ಷಗಳ ಕಾಲ ಮಾಡಿದ ಕಾರ್ಯವನ್ನು ನಾವು ಐವತ್ತು ತಿಂಗಳಲ್ಲಿ ಮಾಡಿದ್ದೇವೆ. ಮನೆ ಬಾಡಿಗೆಯಿಂದ ಬರುವ ಆದಾಯಕ್ಕೆ ತೆರಿಗೆ ವಿಸದಿರಲು ತೀರ್ಮಾನಿಸಲಾಗಿದೆ. ಶ್ರೀಸಾಮಾನ್ಯರ ಹಣ ತಿನ್ನುತ್ತಿರುವವರನ್ನು ನಾನು ಮನೆಗೆ ಕಳಿಸುತಿದ್ದೇನೆ. ಪ್ರಾಮಾಣಿಕರಿಗೆ ನಾನು ಇಷ್ಟವಾಗುತ್ತೇನೆ. ಭ್ರಷ್ಟರಿಗೆ ನಾನು ಎಂದರೆ ಕಷ್ಟವಾಗುತ್ತಿದೆ. ರಾಷ್ಟ್ರದ ಜನರ ತೆರಿಗೆ ದುಡ್ಡಿನಲ್ಲಿ ದಲ್ಲಾಲಿ ನಡೆಸಿದವರು, ಅಕ್ರಮ ಸಂಪಾದನೆ ಮಾಡಿದವರು ಸರದಿ ಸಾಲಿನಲ್ಲಿ ಒಬ್ಬೊಬ್ಬರಾಗಿ ಕಟಕಟೆಯಲ್ಲಿ ನಿಲ್ಲುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಬಟ್ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದರು.
ನಮಗೆ ಅನಿವಾರ್ಯತೆಯ ಮಾಡೆಲ್ ಬೇಕಾಗಿಲ್ಲ. ಸಮರ್ಥ ಮಾಡೆಲ್ ಬೇಕಾಗಿದೆ. ನಮಗೆ ಗೊಂದಲ ಬೇಕಾಗಿಲ್ಲಘಿ, ಬದಲಾಗಿ ಸ್ಪಷ್ಟತೆ ಬೇಕಾಗಿದೆ. ನಮಗೆ ಋಣಾತ್ಮಕ ಆಲೋಚನೆ ಬೇಕಿಲ್ಲಘಿ, ಧನಾತ್ಮಕ ಆಲೋಚನೆ ಬೇಕಿದೆ. ನಮಗೆ ವಂಶಪಾರಂಪರ್ಯ ಬೇಕಿಲ್ಲಘಿ, ವಿಕಾಸ ಬೇಕು ಎಂದು ಮಾರ್ಮಿಕವಾಗಿ ಹೇಳಿದ ಪ್ರಧಾನಿ ಮೋದಿ ರಾಷ್ಟ್ರ ವಿಕಾಸವಾಗಬೇಕಾದರೆ ವಂಶ ಪರಂಪರೆಯ ಪಕ್ಷ ಅಕಾರದಲ್ಲಿರಬಾರದು. ವಂಶಪಾರಂಪರೆಯ ಅಕಾರ ಅಸ್ತಿತ್ವದಲ್ಲಿದ್ದರೆ, ರಾಷ್ಟ್ರದ ಅಭಿವೃದ್ಧಿಯಾಗುವುದಿಲ್ಲ. ಶ್ರೀಸಾಮಾನ್ಯರ ಪ್ರಗತಿಯಾಗುವುದಿಲ್ಲ. ಬದಲಾಗಿ ವಂಶಸ್ಥರ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಆಯ್ಕೆಯನ್ನು ಪ್ರಜ್ಞಾವಂತ ನಾಗರಿರು ನಿರ್ಧರಿಸಲಿ ಎಂದರು.
ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬೇನಾಮಿ ಹೆಸರಿನಲ್ಲಿ ಆಸ್ತಿ, ಹಣ ಮಾಡಿದವರನ್ನು ಮುಟ್ಟಲು ಆಗುತ್ತಿರಲಿಲ್ಲ. ಇದೀಗ ಅಕ್ರಮ ಆಸ್ತಿ, ಹಣ ಮಾಡಿದ ಭ್ರಷ್ಟರು ನ್ಯಾಯಾಲಯದಲ್ಲಿ ನಿಲ್ಲುವಂತಾಗಿದೆ. ಕಿವಿ ತೆರೆದು ಕೇಳಿ, ಈ ಹಿಂದಿನ ಹತ್ತು ವರ್ಷಗಳಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ 13 ಲಕ್ಷ ಮನೆ ಕಟ್ಟಿದೆ. ಇದರಲ್ಲಿ 9 ಲಕ್ಷ ಮನೆಗಳನ್ನು ಜನರಿಗೆ ನೀಡಿದೆ. ಆದರೆ, ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕೂವರೆ ವರ್ಷದಲ್ಲಿ 27 ಲಕ್ಷ ಮನೆಗಳನ್ನು ನಿರ್ಮಿಸಿದೆ. ಇದರಲ್ಲಿ 13 ಲಕ್ಷ ಕುಟುಂಬಗಳು ಕೇಂದ್ರ ಸರ್ಕಾರ ನಿರ್ಮಿಸಿದ ಮನೆಗಳಲ್ಲಿ ವಾಸಿಸುತ್ತಿವೆ. ಕೇಂದ್ರ ಸರ್ಕಾರ ಶ್ರೀಸಾಮಾನ್ಯನ ಅಭಿವೃದ್ಧಿ, ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಆದರೆ, ಸ್ವಾರ್ಥಪರ ಚಿಂತನೆಗಳನ್ನು ಸಾÀಲ್ಯಗೊಳಿಸುವ ಪಕ್ಷಗಳು ಅಕಾರಕ್ಕೆ ಬಂದರೆ ಸ್ವಾರ್ಥ ಹೆಚ್ಚುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಅನಂತಕುಮಾರ ಹೆಗಡೆ, ಸದಾನಂದಗೌಡ, ರಮೇಶ ಜಿಣಜಿಣಗಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳಿಧರರಾವ್, ಮಾಜಿ ಡಿಸಿಎಂ ಆರ್.ಅಶೋಕ, ಸಂಸದರಾದ ಪ್ರಹ್ಲಾದ ಜೋಶಿ, ಶಿವಕುಮಾರ ಉದಾಸಿ, ಮಾಜಿ ಸಚಿವರಾದ ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ ಮೊದಲಾದವರು ಇದ್ದರು.