ಎಂದಿಗೂ ನಾವು ನಮ್ಮತನವನ್ನು ಬಿಡಬಾರದು: ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು,ಫೆ.10-ಯಾವುದೇ ಕಾರಣಕ್ಕೂ ನಾವು ನಮ್ಮತನವನ್ನು ಬಿಡಬಾರದು ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ತಮ್ಮದೇ ಜೀವನದ ದೃಷ್ಟಾಂತದ ಮೂಲಕ ವಿವರಿಸಿದರು.

ಕೆಲವರು ನನ್ನನ್ನು ಕೇಳುತ್ತಾರೆ, ನೀವು ಈಗ ಉಪ ರಾಷ್ಟ್ರಪತಿ ಆಗಿದ್ದೀರಿ; ಈಗಲೂ ಪಂಚೆ, ಶರ್ಟು ಧರಿಸ್ತೀರಿ ಅಂತ. ಅದಕ್ಕೆ ನಾನು ಹೌದು, ಯಾಕೆ ಈಗೇನಾಗಿದೆ ಎಂದೆ; ಅದಕ್ಕವರು ಪೆÇೀಸ್ಟ್ ಚೇಂಜ್ ಆಗಿದೆ ವೇಷ ಭೂಷಣ ಬದಲಾಗಬೇಕಲ್ಲ ಎಂದರು.

ನಾನು ಹೇಳಿದೆ: ಎಂದಿಗೂ ನಾವು ನಮ್ಮತನವನ್ನು ಬಿಡಬಾರದು. ಬ್ರಾಂಡ್ ಏನಿದ್ದರೂ ಹೆಸರಿಗೆ, ಅದಕ್ಕೆ ಜೀವ ಕೊಡೋರು ನಾವು.ನಮ್ಮ ವ್ಯಕ್ತಿತ್ವ, ಪರಿಚಯ ನಮ್ಮತನದಿಂದಲೇ ಆಗಬೇಕು ಎಂದು ನುಡಿದರು.

ಒಂದು ವೇಳೆ ನಾವು ನಮ್ಮ ಪರಿಚಯ, ನಮ್ಮ ಸಂಸ್ಕøತಿಗಳ ಪರಿಚಯ ಬಿಟ್ಟರೆ ನಾವು ನಮ್ಮತನಕ್ಕೆ ಅವಮಾನ ಮಾಡಿದಂತೆ ಎಂದರು.

ನಾನು ಈಗ ಉಪರಾಷ್ಟ್ರಪತಿ ಆಗಿದ್ದೀನಿ. ಹಾಗಾಗಿ ಹೊರಗೆ ಜಾಸ್ತಿ ಹೋಗಲು ಆಗುತ್ತಿಲ್ಲ. ಇಲ್ಲವೆಂದಾದರೆ ಮೊದಲು ಮತ್ತು ಈಗಲೂ ಜನಾರ್ದನ್ ಹೋಟೆಲ್ ಊಟ, ತಿಂಡಿ ನೆನಪಾಗುತ್ತೆ. ಈ ಮೊದಲು ಬೆಳಗ್ಗೆ ತಿಂಡಿಗೆ ಅಲ್ಲೇ ಹೋಗುತ್ತಿದ್ದೆ .ನಮ್ಮ ಊಟ, ಸಂಸ್ಕøತಿ, ಸಂಪ್ರದಾಯಗಳ ಉಳಿವಿಗೆ ನಮ್ಮ ಶ್ರಮ ಇರಬೇಕು ಎಂದು ಕಿವಿಮಾತು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ