ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು,ಫೆ.10-ದೇಶದ ಆರ್ಥಿಕಾಭಿವೃದ್ಧಿಗೆ ಶಿಕ್ಷಣದ ಮೇಲಿನ ಹೂಡಿಕೆ ಮತ್ತು ಕಾಳಜಿಯನ್ನು ಸರ್ಕಾರಗಳು ಹೆಚ್ಚಿಸಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ನಗರ ಹೊರವಲಯದ ಸಿಎಂಆರ್ ವಿವಿಯ ನೂತನ ಕ್ಯಾಂಪಸ್ ಉದ್ಘಾಟನೆ ಮಾಡಿದ ಉಪರಾಷ್ಟ್ರಪತಿಗಳು, ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ವೇದಗಳು ನಮ್ಮ ಶಿಕ್ಷಣ ಮತ್ತು ಸಂಸ್ಕøತಿಗೆ ಮೂಲ ಎಂದರು.

ಭಾರತ ಪುರಾತನ ಕಾಲದಿಂದಲೂ ಪ್ರತಿಭಾವಂತರ ದೇಶವಾಗಿದೆ.

ಪ್ರತಿಭಾವಂತರನ್ನು ಗುರುತಿಸಿ ಪೆÇ್ರೀ ಅವಕಾಶಗಳನ್ನು ಕಲ್ಪಿಸುವ ಅಗತ್ಯವಿದೆ. ಭಾರತದ ವಿಶ್ವಗುರುವಿನ ಸ್ಥಾನವನ್ನು ಹೊಂದಿದ್ದು ಅದನ್ನು ಮರಳಿ ಪಡೆಯಬೇಕಿದೆ. ಭಾರತೀಯರು ವಿಶ್ವ ಪ್ರಜೆಗಳಾಗಿ ಬಾಳಬೇಕು ಎಂದರು.

ಯೋಗ ಒಂದು ವ್ಯಾಯಾಮ ಕಲೆಯಾಗಿದೆ ಎಂದ ಅವರು, ಬೇಟಿ ಬಚಾವೊ, ಬೇಟಿ ಪಡಾವೋ, ಸ್ವಚ್ಛ ಭಾರತ ಕಾರ್ಯಕ್ರಮಗಳು ಸಾಮಾಜಿಕ ಆಂದೋಲನಗಳಾಗಿದ್ದು, ಪಕ್ಷ ಮತ್ತು ವ್ಯಕ್ತಿಯ ಹಿನ್ನೆಲೆಯಲ್ಲಿ ಇಟ್ಟುಕೊಂಡು ನೋಡಬಾರದು ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ , ಸಿಎಂಆರ್ ವಿವಿಯ ಕುಲಪತಿ ಡಾ.ಸಬಿತಾ ರಾಮಮೂರ್ತಿ, ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಅಧ್ಯಕ್ಷ ಡಾ.ಕೆ.ಪಿ.ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ