ನವದೆಹಲಿ: ಯುಪಿಎ ಸರ್ಕಾರದಲ್ಲಿ ನಂದನ್ ನೀಲಕೇಣಿಯವರ ಕಲ್ಪನೆಯಲ್ಲಿ ಮೂಡಿ ಬಂದಂತಹ ಮಹತ್ವದ ಆಧಾರ್ ಯೋಜನೆಗೆ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯ ಕುರಿತಾದ ತಮ್ಮ ಬರಹವೊಂದನ್ನು ಈಗ ಬಿಲ್ ಗೇಟ್ಸ್ ಈಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.”2009 ರಲ್ಲಿ ನನ್ನ ಸ್ನೇಹಿತ ನಂದನ್ ನೀಲಕೇಣಿ ಭಾರತ ಸರ್ಕಾರದ ಮೂಲಕ ಡಿಜಿಟಲ್ ಗುರುತು ವ್ಯವಸ್ಥೆಯೊಂದನ್ನು ಜಾರಿಗೆ ತಂದರು.ಇದು ದಶಕದ ನಂತರ ಸುಮಾರು 1.3 ಬಿಲಿಯನ್ ಜನರು ಈ ಕಾರ್ಯಕ್ರಮದಲ್ಲಿ ನೊಂದಣಿಯಾಗಿದ್ದಾರೆ” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ. ಈ ಯೋಜನೆಯ್ ಕುರಿತಾಗಿ ವಿಸ್ತೃತ ಬರಹವನ್ನು Making the world’s invisible people, visible ಎನ್ನುವ ಶೀರ್ಷಿಕೆಯಡಿಯಲ್ಲಿ ಬರೆದಿದ್ದಾರೆ.
ಕಳೆದ ಒಂದು ದಶಕದಿಂದ ನಂದನ್ ನೀಲಕಣಿ ಈ ಅದೃಶ್ಯ ಜನರನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.