ಕಾಶ್ಮೀರದ ಕುಲ್ಗಾಮ್ ಪೊಲೀಸ್ ಠಾಣೆ ಮೇಲೆ ಹಿಮಪಾತ: 6 ಪೊಲೀಸ್ ಸೇರಿ 10 ಜನರ ಕಣ್ಮರೆ

ಶ್ರೀನಗರ : ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಇಲ್ಲಿನ ಕುಲ್​ಗಾಮ್ ಜಿಲ್ಲೆಯ ಜವಹಾರ್ ಟನಲ್ ಬಳಿ ಇರುವ ಪೊಲೀಸ್ ಠಾಣೆ ಸಮೀಪ ಹಿಮಪಾತ ಸಂಭವಿಸಿ 6 ಪೊಲೀಸ್ ಸಿಬ್ಬಂದಿ ಸೇರಿದಂತೆ 10 ಮಂದಿ ಕಣ್ಮರೆಯಾಗಿದ್ದಾರೆ.

ಘಟನೆ ಸಂಭವಿಸಿದ ವೇಳೆ 20ಕ್ಕೂ ಹೆಚ್ಚು ಮಂದಿ ಪೊಲೀಸ್ ಪೋಸ್ಟ್​ ಬಳಿ ಇದ್ದರು. ಈ ಪೈಕಿ 10 ಮಂದಿ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ರಕ್ಷಣಾ ಸಿಬ್ಬಂದಿ ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆ ಸ್ಥಳಕ್ಕೆ ಧಾವಿಸಿದೆ.

ಹಿಮಪಾತದಿಂದಾಗಿ ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಜಮ್ಮು ಕಾಶ್ಮೀರದ 22 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯೊಳಗಾಗಿ ಹಿಮಪಾತ ಸಂಭವಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಇನ್ನು ಮುನ್ನೆಚರಿಕೆ ಕ್ರಮವಾಗಿ ಕುಲ್​​ಗಾಮ್ ಜಿಲ್ಲೆಯ ಅಪಾಯಕಾರಿ ಸ್ಥಳಗಳಿಂದ 78 ಕುಟುಂಬಗಳನ್ನು ಶಿಫ್ಟ್​ ಮಾಡಲಾಗಿದೆ.

6 Policemen Among 10 Missing After Avalanche In Jammu And Kashmir’s Kulgam

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ