ರೈತರ ಖಾತೆಗೆ 10 ಸಾವಿರ ರೂ. ನೇರ ವರ್ಗಾವಣೆ

ಬೆಂಗಳೂರುಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಎರಡನೇ ಬಜೆಟ್​ ಮಂಡನೆ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಗರಿಗೆದರಿದ ರಾಜಕೀಯ ಬೆಳವಣಿಗೆಯ ಬೆನ್ನಲ್ಲೇ ಬಜೆಟ್​ ಮಂಡನೆ ಆರಂಭವಾಗಿದೆ. ಇದರ ಹಿಂದೆಯೇ ಬಿಜೆಪಿ ಶಾಸಕರು ಸದನವನ್ನು ಧಿಕ್ಕರಿಸಿ ಹೊರನಡೆದಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿ ವಿಸ್ತಾರವಾದ ಬಜೆಟ್​ ಮಂಡಿಸಿದರು. ಈ ಬಾರಿಯ ಬಜೆಟ್​ನಲ್ಲಿನ ಪ್ರಮುಖಾಂಶಗಳು ಈ ಕೆಳಗಿವೆ.

ಬಜೆಟ್ಹೈಲೈಟ್ಸ್​:

  • ರೈತರ ಸಾಲಮನ್ನಾಗೆ 46 ಸಾವಿರ ಕೋಟಿ ರೂ.
  • ರೈತರಿಂದ ಕೃಷಿಉತ್ಪನ್ನ ಖರೀದಿಸಿ ಮಾರಾಟ ಮಾಡಲು ವ್ಯವಸ್ಥೆ
  • 600 ಸಂತೆಗಳನ್ನುತಲಾ 1ಕೋಟಿ ವೆಚ್ಚದಲ್ಲಿಸ್ಥಾಪಿಸುವುದು
  • ರೈತರ ಬೆಳೆಗೆ ಸಾವಿರ ಕೋಟಿ ಬೆಂಬಲ ಬೆಲೆ ಘೋಷಣೆ
  • ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚಳ
  • ಕಬ್ಬು ಬೆಳೆಗಾರರ ಬಾಕಿ ಕೊಡಿಸಲು ಹೊಸಕಾಯ್ದೆ
  • ಶೂನ್ಯ ಬಂಡವಾಳ ಸಂಬಂಧಿಸಿದ ಕೃಷಿಗೆ ಆದ್ಯತೆ
  • ಕಡಿಮೆ ವೆಚ್ಚ-ಹೆಚ್ಚು ಉತ್ಪಾದನೆಯ ಗುಂಪು ಕೃಷಿಯೋಜನೆ
  • ಮಹಿಳಾ ರೈತರಿಗೆ ವಿಶೇಷ ಕೃಷಿಪ್ಯಾಕೇಜ್
  • ಫಸಲ್ ಭೀಮ ಯೋಜನೆಗೆ ಪರ್ಯಾಯ ಸ್ಕೀಮ್
  • ರಾಜ್ಯ ಸರ್ಕಾರ ಪ್ರಾಯೋಜಿತ ಬೆಳೆ ವಿಮೆ ಯೋಜನೆ
  • ಇಸ್ರೇಲ್ಮಾದರಿ ಕೃಷಿ ತಂತ್ರಜ್ಞಾನ ಜಾರಿ
  • ಎಲ್ಲನಗರಗಳಲ್ಲಿಬಡವರ ಬಂಧು ಕಾರ್ಯಕ್ರಮ ವಿಸ್ತರಣೆ
  • ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಸ ಪಾಸ್
  • ಕೇಂದ್ರೀಯ ವಿದ್ಯಾಲಯಮಾದರಿಯಲ್ಲಿ ಪಬ್ಲಿಕ್ ಸ್ಕೂಲ್
  • 1 ರಿಂದ 10 ನೇ ತರಗತಿವರೆಗೆ ಒಂದೇ ಶಾಲೆ
  • 4 ವರ್ಷದಲ್ಲಿ 1000 ಸ್ಕೂಲ್ ಘೋಷಣೆ ಸಾಧ್ಯತೆ
  • ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸುಭದ್ರ ಶಾಲೆ
  • ಸರ್ಕಾರಿ ಶಾಲೆಗಳು ಇಂಗ್ಲಿಷ್ ಮಧ್ಯಮ ಕಡ್ಡಾಯ
  • ದುಸ್ಥಿತಿಯಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಸುಭದ್ರ ಯೋಜನೆ
  • ಮಲೆನಾಡು ಶಾಲಾ ವಿದ್ಯಾರ್ಥಿಗಳಿಗೆ ಛತ್ರಿ, ರೈನ್ ಕೋಟ್ ಭಾಗ್ಯ ‘
  • ಆರೋಗ್ಯ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿವಿಶೇಷ ಸ್ಕೀಮ್
  • ಎಲ್ಲಾಜಿಲ್ಲೆಯಲ್ಲಿಸರ್ಕಾರಿ ಆಯುರ್ವೇದಿಕ್ ಹೋಮಿಯೋಪತಿ
  • ಬೆಳಗಾವಿ – ಖಾನಾಪುರದಲ್ಲಿತಾಯಿ ಮಕ್ಕಳ ಆಸ್ಪತ್ರೆ
  • ಹುಬ್ಬಳ್ಳಿಯಲ್ಲಿಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ
  • 10 ವರ್ಷ ಸೇವೆಸಲ್ಲಿಸಿ ನಿವೃತ್ತರಾಗುವ ಆಶಾ ಕಾರ್ಯಕರ್ತೆಯರಿಗೆ 50,000 ಪರಿಹಾರ
  • ಎಲ್ಲಾಜಿಲ್ಲೆಗಳಲ್ಲಿರುವ ಔಷದಿ ಅಂಗಡಿಗಗಳಿಗೆ ಸ್ವಂತ ಕಟ್ಟಡ ಭಾಗ್ಯ
  • ಶಿವಮೊಗ್ಗದಲ್ಲಿಮಂಗನ ಕಾಯಿಲೆ ತಡೆಗಟ್ಟಲು ಸಂಶೋಧನಾ ಕೇಂದ್ರ
  • ಮನೆ ಕಟ್ಟುವವರಿಗೆ ಪ್ರೋತ್ಸಾಹ ಧನ ಹೆಚ್ಚಳ
  • ಈಗಿರುವ ₹1.20 -2 ಲಕ್ಷ ಹಣ5 ಲಕ್ಷದವರೆಗೂ ಹೆಚ್ಚಳ
  • ಹಸುಗಳನ್ನು ಕಟ್ಟಿಕೊಳ್ಳಲು ಪಶು ಕುಟೀರ ಭಾಗ್ಯ
  • ಮುಜರಾಯಿ ದೇಗುಲಗಳ ಅಭಿವೃದ್ಧಿಗೆ ಹೆಚ್ಚು ಹಣ ನಿಗದಿ
  • ಮುಜರಾಯಿ ದೇವಸ್ಥಾನಗಳಲ್ಲಿಅರ್ಚಕರ ಸಹಾಯಧನ ಹೆಚ್ವಳ
  • ವರ್ಷಕ್ಕೆ 48,000 ರೂ ಹಣ 60,000ಕ್ಕೆ ಏರಿಕೆ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ
  • ಮಹಿಳೆಯರು, ಮಕ್ಕಳು, ಹಿರಿಯ ನಾಗರೀಕರಿಗೆ ವಿಶೇಷ ಸೌಲಭ್ಯ
  • ನಿರುದ್ಯೋಗಿ ಯುವಕರಿಗೆ ಗ್ರಾ.ಪಂ.ಮಟ್ಟದಲ್ಲಿ ಸಸಿ ನೆಡುವ ಕಾರ್ಯಕ್ರಮ
  • ತಿಂಗಳಿಗೆ ಗಿಡನೆಟ್ಟು ಪೋಷಿಸಲು 5 ಸಾವಿರ ರೂಪಾಯಿ ವೇತನ
  • KRS ಬಳಿ ಡಿಸ್ನಿಲ್ಯಾಂಡ್ಮಾದರಿಯಲ್ಲಿ ಪ್ರವಾಸಿತಾಣ
  • ಮೇಕೆದಾಟು ಯೋಜನೆಗೆ ಹೆಚ್ಚುವರಿ ಹಣ
  • ರೈತರ ಪಂಪ್​ ಸೆಟ್​ಗೆ ಬಂಪರ್ ಅನುದಾನ
  • ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಜಲಧಾರೆ
  • ಮಳೆ ನೀರು ಸಂಗ್ರಹದ ಜಲಾಮೃತಯೋಜನೆ
  • ಸಮಾಜ ಕಲ್ಯಾಣ ಇಲಾಖೆಗೆ
  • ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಹೊಸಯೋಜನೆ
  • ಬೋರ್ವೆಲ್ಕೊರೆಸುವ ಗಂಗಾ ಕಲ್ಯಾಣಕ್ಕೆ ಅನುದಾನ ಹೆಚ್ಚಳ
  • ಲೋಕೋಪಯೋಗಿ ಇಲಾಖೆಗೆ
  • ಚರಂಡಿ ಮೂಲಭೂತಸೌಕರ್ಯ ಅಭಿವೃದ್ಧಿಗೆ ಅನುದಾನ
  • ಮಹಾನಗರಪಾಲಿಕೆ, ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳಿಗೆ ಅನುದಾನ
  • ಸರ್ಕಾರಿ ನೌಕರರಿಗೆ ಬಂಪರ್
  • ಸರ್ಕಾರಿ ನೌಕರರಿಗಿರುವ ಅನುದಾನ ಹೆಚ್ಚಳ
  • ನಿವೃತ್ತ ವಯೋಮಿತಿ 60 ವರ್ಷದ ಬದಲು 65 ವರ್ಷಕ್ಕೆ
  • ಸರ್ಕಾರಿ ಸಿಬ್ಬಂದಿಗೆ 4ನೇಶನಿವಾರ ರಜೆ ಘೋಷಣೆ ಸಾಧ್ಯತೆ
  • ನೂತನ ಪಿಂಚಣಿ ಯೋಜನೆ ರದ್ದು ಮಾಡುವ ಸಾಧ್ಯತೆ
  • ಔರಾದ್ಕರ್ವರದಿಯಂತೆ ಪೊಲೀಸರಿಗೆ ಸಮಾನ ವೇತನ ಘೋಷಣೆ

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ