ನಲವತ್ತು ಶಾಸಕರು ರಾಜೀನಾಮೆ ನೀಡಲಿ ಸ್ವೀಕರಿಸುತ್ತೇನೆ; ಸ್ಪೀಕರ್​​​​ ರಮೇಶ್​​​ ಕುಮಾರ್​​​!

ಬೆಂಗಳೂರುಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿ ಸರ್ಕಾರದ ಯಾವುದೇ ಶಾಸಕರು ರಾಜೀನಾಮೆ ನೀಡಲಿ ಸ್ವೀಕರಿಸುತ್ತೇನೆ ಎಂದು ಸ್ಪೀಕರ್​​​ ರಮೇಶ್​​ ಕುಮಾರ್​​ ಹೇಳಿದ್ದಾರೆ. ಕಾಂಗ್ರೆಸ್ಸಿನ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ನೀವೇ ಹೇಳುತ್ತಿದ್ದೀರಿ. 4 ಶಾಸಕರಲ್ಲ, ನಲವತ್ತು ಜನ ರಾಜೀನಾಮೆ ಕೊಟ್ಟರು ತೆಗೆದುಕೊಳ್ಳಲು ಸಿದ್ದನಿದ್ದೇನೆ ಎಂದಿದ್ದಾರೆ. ಹಾಗೆಯೇ ಗೈರಾದ ಶಾಸಕರು ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ಶಾಸಕರು ರಾಜೀನಾಮೆ ನೀಡುವ ವಿಚಾರ ಗೊತ್ತೇ ಇಲ್ಲ. ಗೈರಾದವರ ಮೇಲೆ ಕ್ರಮಕೈಗೊಳ್ಳಲು ನಾನ್ಯಾರು? ಎಂದು ಪ್ರಶ್ನಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜನ್ನಪ್ಪನಹಳ್ಳಿ ಗ್ರಾಮದಲ್ಲಿ ಸ್ಪೀಕರ್​​ ರಮೇಶ್​​​ ಕುಮಾರ್​​ ಅವರು, ಗಣೇಶ ಮೂರ್ತಿ ಉದ್ಘಾಟಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಇವರು,  ಫೆಬ್ರವರಿ 8 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಬುಧವಾರದಿಂದಲೇ ಬಜೆಟ್ ಅಧಿವೇಶನ ಆರಂಭವಾಗಿದೆ. ಈ ಮಧ್ಯೆ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆಂಬ ಮಾತು ಕೇಳಿ ಬಂದಿವೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ರಮೆಶ್ ಕುಮಾರ್ ಹೀಗೆ ವ್ಯಂಗ್ಯವಾಡಿದ್ದಾರೆ.
ಇನ್ನು ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾಗಿರುವ ಶಾಸಕ ಜೆ.ಎನ್​ ಗಣೇಶ್​ ಅಧಿವೇಶನಕ್ಕೆ ಹಾಜರಾದಲ್ಲಿ ಬಂಧಿಸಿ ಎಂದು ಪೊಲೀಸರಿಗೆ ರಮೇಶ್​​​ ಕುಮಾರ್​​ ಅನುಮತಿ ನೀಡಿದ್ದಾರೆ ಎನ್ನಲಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ಪೀಕರ್​​, ಶಾಸಕ ಗಣೇಶ್​​ನನ್ನು ಬಂಧಿಸುವಂತೆ  ಸೂಚಿಸಲು ನಾನೇನು ಪೋಲಿಸ್ ಇಲಾಖೆ ಅಧಿಕಾರಿನಾ?’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ‘ಬೆಳೆ, ಮಳೆ ಚೆನ್ನಾಗಿ ಆಗಲಿ; ನೀರು ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದೆ’ ಎಂದು ತಿಳಿಸಿದ್ದಾರೆ.

ಈಗಾಗಲೇ ರಾಜ್ಯ ಬಿಜೆಪಿ ನಾಯಕರು ಹೊಸತಂತ್ರ ಹೆಣೆದಿದ್ದಾರಂತೆ! ಇಂದೇ ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಮುಂಬೈನಿಂದ ಬೆಂಗಳೂರಿಗೆ ಬರಲಿದೆ ಎನ್ನಲಾಗಿದೆ. ನಾಳೆ ಅಧಿವೇಶಕ್ಕೆ ಶಾಸಕರು ಹಾಜರಾಗಲಿದ್ದು, ಅಲ್ಲಿಯೇ ರಾಜೀನಾಮೆ ಕೊಡಿಲಸು ಬಿಎಸ್​​ವೈ ಪ್ಲಾನ್​​ ಮಾಡಿದ್ದಾರೆ. ಒಂದು ವೇಳೆ ನಿರೀಕ್ಷೆಯಂತೆಯೇ 14 ಶಾಸಕರು ಸಿಕ್ಕಿದಲ್ಲಿ ನಾಳೆಯೇ ರಾಜೀನಾಮೆ ನೀಡಲಿದ್ದಾರೆ. ಇಲ್ಲವಾದಲ್ಲಿ ಮತ್ತೊಂದು ಯೋಜನೆ ರೂಪಿಸಲಾಗುವುದು ಎನ್ನುತ್ತಾರೆ ಆಪ್ತರು.
ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಸದನದಲ್ಲಿ ಶಾಸಕರ ಸಂಖ್ಯೆಯೂ ಹಾವು-ಏಣಿ ಆಟದಂತಾಗಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಒಟ್ಟು 224 ಶಾಸಕರಿದ್ದಾರೆ. ಈ ಪೈಕಿ ಕಾಂಗ್ರೆಸ್​​-ಜೆಡಿಎಸ್​​ ಸಮ್ಮಿಶ್ರ ಸರ್ಕಾರದ ಸಂಖ್ಯಾ ಬಲ 118 ಆಗಿದೆ. ಅಲ್ಲದೇ ವಿಪಕ್ಷ ಬಿಜೆಪಿ 104 ಜತೆಗೆ ಪಕ್ಷೇತರರು ಇಬ್ಬರು ಸೇರಿ ಒಟ್ಟು 106 ಸಂಖ್ಯಾ ಬಲವಿದೆ. ಕಾಂಗ್ರೆಸ್‍ನ ಸಂಭವನೀಯ ಬಂಡಾಯ ಶಾಸಕರ ಸಂಖ್ಯೆ 5 ಆಗಿದ್ದು, ಐವರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಂದು ವೇಳೆ ಹಾಗೆಯೇ ಆಗಿದ್ದಲ್ಲಿ ಐವರು ಶಾಸಕರು ಅನರ್ಹರಾಗಲಿದ್ದು, ದೋಸ್ತಿಗಳ ಬಲ 113ಕ್ಕೆ ಕುಸಿಯಲಿದೆ. ಇದರಿಂದಾಗಿ ಸರಳ ಬಹುಮತವಾಗಲಿದೆ. ಹೀಗಾಗಿ ಅತೃಪ್ತರು ಅನರ್ಹಗೊಂಡರೆ ಸರ್ಕಾರಕ್ಕೆ ಯಾವುದೆ ಅಪಾಯವಿಲ್ಲ. ಆದರೆ, ಬಜೆಟ್ ಅನುಮೋದನೆ ವೇಳೆ ಎಂಟು ಮಂದಿ ಅಡ್ಡ ಮತದಾನ ಮಾಡಿದರೇ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ. ನಂತರ ರಾಜೀನಾಮೆ ಕೊಡಿಸಿ ಸರ್ಕಾರ ಬೀಳಿಸಲು ಇನ್ನೂ 8 ಶಾಸಕರ ರಾಜೀನಾಮೆ ಅನಿವಾರ್ಯವಾಗುತ್ತದೆ ಎನ್ನುತ್ತಿವೆ ಮೂಲಗಳು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ