ನಾಗ್ಪುರ: ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ವಿದರ್ಭ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಹೊರ ಹೊಮ್ಮಿದೆ. ಫೈನಲ್ನಲ್ಲಿ ಸೌರಷ್ಟ್ರ ವಿರುದ್ಧ 78 ರನ್ಗಳ ಗೆಲುವು ದಾಖಲಿಸುವ ಮೂಲಕ ಎರಡನೇ ಬಾರಿಗೆ ದೇಸಿ ಸಾಮ್ರಾಟನಾಗಿ ಹೊರ ಹೊಮ್ಮಿದೆ.
ಎರಡನೇ ಬಾರಿಯು ಪ್ರಶಸ್ತಿ ಮುಡಿಗೇರಿಸಿಕೊಂಡ ವಿದರ್ಭ ದೇಸಿ ಟೂರ್ನಿಯ ಆರನೇ ತಂಡ ಎನಿಸಿಕೊಂಡಿದೆ.
ಸೌರಾಷ್ಟ್ರ ತಂಡದ ಸೋಲಿಗೆ ತಂಡದ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ಅವರ ಬ್ಯಾಟಿಂಗ್ ವೈಫಲ್ಯವೇ ಕಾರಣೆಂದು ವಿಶ್ಲೇಶಿಸಲಾಗುತ್ತಿದೆ.
ವಿದರ್ಭ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಸೌರಾಷ್ಟ್ರ ತಂಡಕ್ಕೆ 206 ರನ್ಗಳ ಗೆಲುವಿನ ಗುರಿ ನೀಡಿತ್ತು. ವಿದರ್ಭ ತಂಡದ ಬೌಲರ್ ಆದಿತ್ಯ ಸಾವರ್ತೆ ಎರಡನೇ ಇನ್ನಿಂಗ್ಸ್ನಲ್ಲಿ 59 ರನ್ ನೀಡಿ ಆರು ವಿಕೆಟ್ ಪಡೆದು ಮಿಂಚಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.