ಟೀಂ ಇಂಡಿಯಾ ಕೇನ್ ವಿಲಿಯಮ್ಸನ್ ಪಡೆ ವಿರುದ್ಧದ ಮೊದಲ ಪಂದ್ಯದಲ್ಲಿ 80 ರನ್ಗಳಿಂದ ಸೋಲು ಮೂಲಕ ಟಿ20 ಫಾರ್ಮೆಟ್ನಲ್ಲಿ ಹೀನಾಯ ಸೋಲು ಕಂಡಿದೆ. ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಟೀಂ ಇಂಡಿಯಾದ ತಾಕತ್ತು ಏನೆಂಬುದು ಮತ್ತೋಮ್ಮೆ ಬಟಾಬಯಲಾಗಿದೆ.
220 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಬ್ಲೂ ಬಾಯ್ಸ್ ಆರಂಭದಲ್ಲೆ ಒತ್ತಡದಲ್ಲಿ ಸಿಲುಕಿತು. ತಂಡದಲ್ಲಿ 8 ಬ್ಯಾಟ್ಸ್ಮನ್ಗಳಿದ್ದು ಬಿಗ್ ಟಾರ್ಗೆಟ್ ಚೇಸ್ ಮಾಡಲಾಗದೇ ಕಿವೀಸ್ ಎದುರು ಮಂಡಿಯೂರಿತು. ಹಾಗಾದ್ರೆ ಬನ್ನಿ ರೋಹಿತ್ ಪಡೆ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಪರೇಡ್ ನಡೆಸಿತು ಅನ್ನೊದನ್ನ ನಾವ್ ತೋರಿಸ್ತೀವಿ ನೋಡಿ…
ಬ್ಯಾಟ್ಸ್ಮನ್ : ರೋಹಿತ್ ಶರ್ಮಾ
ರನ್ : 1
ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಬಗ್ಗೆ ಪಂದ್ಯಕ್ಕೂ ಮುನ್ನ ಭಾರೀ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿತ್ತು. ಧವನ್ ಜೊತೆ ಓಪನರ್ರಾಗಿ ಕಣಕ್ಕಿಳೀದ
ಮುಂಬೈಕರ್ ಕೇವಲ ಒಂದು ರನ್ ಗಳಿಸಿ ಟಿಮ್ ಸೌಥಿ ಎಸೆತದಲ್ಲಿ ಜeeಠಿ Squಚಿಡಿe ಲೆಗ್ನಲ್ಲಿದ್ದ ಈeಡಿgusoಟಿ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು.
ಬ್ಯಾಟ್ಸ್ ಮನ್ ; ಶಿಖರ್ ಧವನ್
ರನ್ : 29
ತಂಡದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಟಿ20 ಯಲ್ಲೂ ಫ್ಲಾಪ್ ಪರ್ಫಾಮನ್ಸ್ ಮುಂದುವರೆಸಿದ್ದಾರೆ. ರೋಹಿತ್ ಔಟಾದ ನಂತರ ಒತ್ತಡ ನಿಭಾಯಿಸುವಲ್ಲಿ ಎಡವಿದ ಈ ಡೆಲ್ಲಿ ಡ್ಯಾಶರ್ 29 ರನ್ ಗಳಿಸಿದ್ದಾಗ ವೇಗಿ ಈeಡಿgusoಟಿ ಎಸೆದ ಯಾರ್ಕರ್ಗೆ ಕ್ಲೀನ್ ಬೌಲ್ಡ್ ಆದ್ರು.
ಟಾಪ್ ಆರ್ಡರ್ ಬ್ಯಾಟಿಂಗ್ ಲೈನ್ಅಪ್ ಫುಲ್ ಫೇಲ್
ಓಪನರ್ಸ್ ಕೈಕೊಟ್ಟ ನಂತರ ಟಾಪ್ ಆರ್ಡರ್ನಲ್ಲಿ ಅಚ್ಚರಿ ರೀತಿಯಲ್ಲಿ ಬಂದ ಆಲ್ರೌಂಡರ್ ವಿಜಯ್ ಶಂಕರ್ ಮತ್ತು ರಿಷಭ್ ಪಂತ್ ಒಂದಂಕಿ ರನ್ ಬಾರಿಸಿ ಸ್ಪಿನ್ನರ್ ಮಿಶೆಲ್ ಸ್ಯಾಂಟ್ನರ್ ಅವರ ಸ್ಪಿನ್ ಮ್ಯಾಜಿಕ್ಗೆ ಬಲಿಯಾದ್ರು.
ಟೀಂ ಇಂಡಿಯಾ ಫ್ಲಾಪ್ ಶೋ
ಬ್ಯಾಟ್ಸ್ ಮನ್ : ಎಂ.ಎಸ್.ಧೋನಿ
ರನ್ : 39
ಐದನೇ ಕ್ರಮಾಂಕದಲ್ಲಿ ಬಂದ ಧೋನಿ ತಂಡದ ಸ್ಕೋರ್ ಹೆಚ್ಚಿಸಿ ದ್ರು. ಆದರೆ ಮಾಹಿ ಯಾರು ಉತ್ತಮ ಸಾಥ್ ನೀಡಲಿಲ್ಲ. 39 ರನ್ ಗಳಿಸಿದ ಮಾಹಿ ಇನ್ನಿಲ್ಲದ ಹೋರಾಟ ಮಾಡಿದ್ರು. ಆದರೆ ಪ್ರಯೋಜನವಾಗಲಿಲ್ಲ. 39 ರನ್ಗಳಿಸಿದ್ದಾಗ ಸೌಥಿ ಎಸೆತದಲ್ಲಿ ಫರ್ಗ್ಯುಸನ್ ಗೆ ಕ್ಯಾಚ್ ನೀಡಿ ಹೊರ ನಡೆದ್ರು. ಮಾಹಿ ತಂಡದ ಪರ ಹೈಯಸ್ಟ್ ಸ್ಕೋರ್ ಬಾರಿಸಿದ ಬ್ಯಾಟ್ಸಮನ್ ಎನಿಸಿದ್ರು.
ಪಂದ್ಯವನ್ನ ಕೈಚೆಲ್ಲಿದ ಲೋವರ್ ಆರ್ಡರ್ ಬ್ಯಾಟ್ಸ್ಮನ್ಸ್
ಲೋವರ್ ಆರ್ಡರ್ ಬ್ಯಾಟ್ಸ್ಮನ್ಗಳು ಕ್ರೀಸ್ಗೆ ಬರುವಷ್ಟರಲ್ಲಿ ತಂಡ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ದಿನೇಶ್ ಕಾರ್ತಿಕ್ 5, ಕೃನಾಲ್ ಪಾಂಡ್ಯ 20, ಹಾರ್ದಿಕ್ ಪಾಂಡ್ಯ 4 ರನ್ ಗಳಿಸಿ ಪೆವಿಲಿಯನ್ ಸೇರಿದ್ರು.
ಒಟ್ಟಾರೆ ಟೀಂ ಇಂಡಿಯಾ ಅಸಲಿ ತಾಕತ್ತು ಏನೆಂಬುದು ಮತ್ತೋಮ್ಮೆ ಪ್ರೂವ್ ಆಗಿದೆ.