ವೇಗದ ಅರ್ಧ ಶತಕ ಬಾರಿಸಿದ ಸ್ಮೃತಿ

ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟ್ಸ್ ಮನ್ ಸ್ಮೃತಿ ಮಂಧಾನ ಟಿ20 ಕ್ರಿಕೆಟ್ನಲ್ಲಿ ವೇಗದ ಅರ್ಧ ಶತಕ ಬಾರಿಸಿ ಹೊಸ ಇತಿಹಾಸ ಬರೆದಿದ್ದಾರೆ.

ಕೇವಲ 24 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಅರ್ಧ ಶತಕ ಬಾರಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಬಂದ ಸ್ಮ್ಋತಿ ಮಂಧಾನ ಒಟ್ಟು 34 ಎಸೆತ ಎದುರಿಸಿ 7 ಬೌಂಡರಿ 3 ಸಿಕ್ಸರ್ ಬಾರಿಸಿ ಒಟ್ಟು 58 ರನ್ ಗಳಿಸಿದರು .

ಭರ್ಜರಿ ಫಾರ್ಮ್ನಲ್ಲಿರುವ ಸ್ಮೃತಿ ಮಂಧಾನ ಇತ್ತಿಚೆಗೆ ಕಿವೀಸ್ ವಿರುದ್ಧ ಏಕದಿನ ಸರಣಿಯನ್ನ 2-1 ತಂಡ ಗೆಲ್ಲುವಂತೆ ಮಾಡಿದ್ದರು.

ಇಷ್ಟೆ ಅಲ್ಲದೇ ಏಕದಿನ ಱಂಕಿಂಗ್ನಲ್ಲಿ ಸ್ಮೃತಿ ಮೊದಲ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ 15 ಏಕದಿನ ಪಂದ್ಯಗಳನ್ನಾಡಿದ್ದ ಸ್ಮೃತಿ ಮಂಧಾನ ಎರಡು ಶತಕ 8 ಅರ್ಧ ಶತಕ ಗಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ