ಬಿಜೆಪಿ ಸೇರ್ಪಡೆಯಾದ ಹುತಾತ್ಮಯೋಧನ ತಂದೆ

ವಿಜಯ್​ಪುರ್​: ಭಾರತೀಯ ಸೇನಾಪಡೆಯ ಹುತಾತ್ಮ ಯೋಧರೊಬ್ಬರ ತಂದೆ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಸಾಂಬಾ ರ‍್ಯಾಲಿಯ ವೇಳೆ ಇವರು ಬಿಜೆಪಿ ಸೇರ್ಪಡೆಗೊಂಡರು.

44 ರಾಷ್ಟ್ರೀಯ ರೈಫಲ್ಸ್​ ಪಡೆಯಲ್ಲಿ ರೈಫಲ್​ಮ್ಯಾನ್​ ಆಗಿದ್ದ ಔರಂಗಜೇಬ್​ ಅವರನ್ನು ಉಗ್ರರು ಕಳೆದ ವರ್ಷ ಅಪಹರಿಸಿದ್ದರು. ಬಳಿಕ ಫುಲ್ವಾಮಾದಲ್ಲಿ ಅವರನ್ನು ಹತ್ಯೆ ಮಾಡಿದ್ದರು. ಆ ಸಂದರ್ಭದಲ್ಲಿ ರಾಜೌರಿಯಲ್ಲಿರುವ ಇವರ ಮನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಮತ್ತು ಸೇನಾಪಡೆ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಪ್ರತ್ಯೇಕವಾಗಿ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ಇದರಿಂದ ಉತ್ತೇಜಿತರಾಗಿದ್ದ ರೈಫಲ್​ಮ್ಯಾನ್​ ಔರಂಗಜೇಬ್​ ಅವರ ತಂದೆ ಮೊಹಮ್ಮದ್​ ಹನೀಫ್​ ಬಿಜೆಪಿ ಸೇರಲು ಇಚ್ಛಿಸಿದ್ದರು. ಅದರಂತೆ ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲೆಫ್ಟಿನೆಂಟ್​ ಜನರಲ್​ (ನಿವೃತ್ತ) ರಾಕೇಶ್​ ಕುಮಾರ್​ ಶರ್ಮ ಜತೆ ಅವರು ಕೂಡ ಬಿಜೆಪಿ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಹುತಾತ್ಮ ಯೋಧ ಔರಂಗಜೇಬ್​ ತಂದೆ ಮೊಹಮ್ಮದ್​ ಹನೀಫ್​, ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರ ಬಡವರ ಏಳಿಗೆಗಾಗಿ ಶ್ರಮಿಸುತ್ತಿದೆ. ಇದಕ್ಕಾಗಿ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ, ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ವಿಷಯದಲ್ಲಿ ಇದುವರೆಗೆ ದೇಶ ಕಂಡ ಅತ್ಯುತ್ತಮ ಸರ್ಕಾರಗಳಲ್ಲಿ ಇದು ಒಂದೆಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.

Father of martyred Army soldier Aurangzeb joins BJP

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ