ಹುಣಸೂರು,ಫೆ.03-ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ (ಎಂಡಿಸಿಸಿ) ನಲ್ಲಿ ರೈತರ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಇಬ್ಬರು ಮೇಲ್ವಿಚಾರಕರನ್ನು ಪೆÇೀಲೀಸರು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಬಿಳಿಕೆರೆಯಲ್ಲಿರುವ ಬ್ಯಾಂಕಿನ ಮೇಲ್ವಿಚಾರಕ ನವೀನ್ ಮತ್ತು ಹುಣಸೂರು ಶಾಖೆಯ ಕೃಷ್ಣ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾದಾಗ ್ದ ನ್ಯಾಯಾಲಯ ಇಬ್ಬರನ್ನೂ ಪೆÇಲೀಸ್ರ ವಶಕ್ಕೆ ಒಪ್ಪಿಸಿದೆ.
ರೈತರಿಗೆ ನೀಡಬೇಕಿದ್ದ ಹಣದ ದುರ್ಬಳಕೆ ಕುರಿತಂತೆ ಎಂಡಿಸಿಸಿ ಬ್ಯಾಂಕಿನ ಅಂದಿನ ವ್ಯವಸ್ಥಾಪಕ ರಾಮಪ್ಪ ಪೂಜಾರ್ ಇನ್ನಿತರರ ವಿರುದ್ಧ ಹುಣಸೂರು ಪಟ್ಟಣ ಠಾಣೆಯಲ್ಲಿ ಕಳೆದ ತಿಂಗಳಿನಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಮೇಲ್ವಿಚಾರಕರಾದ ಎರಡನೇ ಆರೋಪಿ ನವೀನ್ ಮೂರನೇ ಆರೋಪಿ ಕೃಷ್ಣ ಇಬ್ಬರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.ಆದರೆ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ಹಾಗಾಗಿ ಇಬ್ಬರು ಹುಣಸೂರು ನ್ಯಾಯಾಲಯಕ್ಕೆ ಶರಣಾದರು.
ಬ್ಯಾಂಕಿನ ಈ ಹಿಂದಿನ ವ್ಯವಸ್ಥಾಪಕ ರಾಮಪ್ಪ ಪೂಜಾರ್ ಮತ್ತು ಇತರರು ಬ್ಯಾಂಕಿನ 40.75 ಕೋಟಿ ರೂ.ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಹಾಗೂ ಬ್ಯಾಂಕಿನ ದಾಖಲೆಗಳನ್ನು ನಿಯಮಾವಳಿಯಂತೆ ಕ್ರಮ ವಹಿಸದೇ ರೈತ ಸದಸ್ಯರ ಹಣವನ್ನು ಅವರ ಖಾತೆಗೆ ಜಮಾ ಮಾಡದೆ ಅಕ್ರಮವೆಸಗಿ ಬೇರೆ ಖಾತೆಗೆ ವರ್ಗಾವಣೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ.