ಸಮಸ್ಯೆಗಳನ್ನು ಬಿತ್ತಿ ಬಳಿಕ ಸಲಹೆ ನೀಡುವುದೇ ಕಾಂಗ್ರೆಸ್ ಕೆಲಸ: ಪ್ರಧಾನಿ ವಾಗ್ದಾಳಿ

ನವದೆಹಲಿ:ಭರವಸೆ ಕುರಿತ ಕಾಂಗ್ರೆಸ್ ಹೇಳಿಕೆಗೆ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದು, ಮೊದಲು ಸಮಸ್ಯೆಗಳನ್ನು ಉಂಟುಮಾಡಿ ಬಳಿಕ ಸಲಹೆಗಳನ್ನು ನೀಡುವುದೇ ಕಾಂಗ್ರೆಸ್ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಮ್ಮುವಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ರೈತರ ಸಾಲಮನ್ನಾ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​​ ಅಧಿಕಾರಕ್ಕೆ ಬಂದಿತ್ತು. ಆದರೆ, ಕೊಟ್ಟ ಭರವಸೆಯನ್ನು ಈಡೇರಿಸದೇ ಎಲ್ಲರನ್ನು ಮೂರ್ಖರನ್ನಾಗಿ ಮಾಡಿತು ಎಂದರು. ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್​ಗಢ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸಲಾಮನ್ನಾ ಘೋಷಣೆ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ, ಎಲ್ಲರನ್ನು ಮುರ್ಖರನ್ನಾಗಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ ಎಂದಿದ್ದಾರೆ ಈ ಹಿಂದೆ ಸಾಲಮನ್ನಾಕ್ಕಾಗಿ 6 ಲಕ್ಷ ಕೋಟಿ ರೂ. ಮೀಸಲಿಟ್ಟಿರುವುದಾಗಿ ಹೇಳಿ, ಕೊನೆಯಲ್ಲಿ 52,000 ಕೋಟಿ ಎಂದು ಹೇಳಿ ಮೋಸ ಮಾಡಿತು. ಕಾಂಗ್ರೆಸ್​ ಮೊದಲು ಸಮಸ್ಯೆಯನ್ನು ಉಂಟು ಮಾಡಿ ನಂತರ ಸಲಹೆಯನ್ನು ನೀಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ