ಬೆಂಗಳೂರು, ಜ.29-ಅಂಗಾಂಗ ದಾನ ಮತ್ತು ಶವ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಜೀವ ಸಾರ್ಥಕತೆ ಸಂಸ್ಥೆಯೊಂದಿಗೆ ಸಹಯೋಗ ಮಾಡಿಕೊಂಡಿದೆ ಎಂದು ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಡಾ.ಸಂಜೀವ್ ಗೋವಿಲ್ ತಿಳಿಸಿದರು.
ಕಳೆದ 9 ವರ್ಷಗಳಲ್ಲಿ 200 ಯಶಸ್ವಿ ಯಕೃತ್(ಲಿವರ್) ಕಸಿ ಮಾಡುವ ಮೂಲಕ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಮೂಲಕ ಆಸ್ಪತ್ರೆ ಪ್ರತಿ ತಿಂಗಳು ಸರಾಸರಿ 2-3 ಕಸಿ ಶಸ್ತ್ರಚಿಕಿತ್ಸೆ ಮಾಡುತ್ತಿದೆ. ಇದಲ್ಲದೆ, ಆಸ್ಪತ್ರೆಯತಜ್ಞ ವೈದ್ಯರು 8 ಲಿವರ್-ಕಿಡ್ನಿ, 8 ಕಿಡ್ನಿ-ಮೇದೋಜೀರಕ ಗ್ರಂಥಿ ಕಸಿ ಸೇರಿದಂತೆ ಬಹು ಅಂಗಾಂಗ ಕಸಿ ಮಾಡಿದ್ದು, ಹೆಚ್ಚು ಬಹು ಅಂಗಾಂಗ ಕಸಿ ಮಾಡುತ್ತಿರುವ ಆಸ್ಪತ್ರೆ ಎಂದೂ ಖ್ಯಾತಿ ಗಳಿಸಿದೆ ಎಂದು ಹೇಳಿದರು.
ಇದೇ ವೇಳೆ, ಆಸ್ಪತ್ರೆಯ ತಂಡದ ಸಾಂಘಿಕ ಪ್ರಯತ್ನದ ಫಲವಾಗಿ ದಾನಿಗಳು ಇದೇ ಆಸ್ಪತ್ರೆಗೆ ಅತಿ ಹೆಚ್ಚು ಲಿವರ್ ಕಸಿಗಾಗಿ ಲಿವರ್ದಾನ ಮಾಡಿದ್ದಾರೆ. 2018ರಲ್ಲಿ ತಜ್ಞ ವೈದ್ಯರ ತಂಡ 29 ಅಂಗಾಂಗಗಳನ್ನು ಕಸಿ ಮಾಡಿದ್ದು, ಇದರಲ್ಲಿ 14 ಲಿವರ್ ಕಸಿ ಮಾಡಿದ್ದು, ಶೇ.93 ರಷ್ಟು ಯಶಸ್ವಿ ಸಾಧಿಸಿದೆ ಎಂದು ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ನಮ್ಮತಂಡ ಮತ್ತು ಪರಿಣತ ವೈದ್ಯರು ಬಹು ಅಂಗಾಂಗಗಳ ಕಸಿ ಪ್ರಕ್ರಿಯೆಗಳನ್ನು ನಡೆಸುವ ಮೂಲಕ ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸುವ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಗ್ಲೋಬಲ್ ಆಸ್ಪತ್ರೆಯು ವಿಶೇಷವಾಗಿ ಕರ್ನಾಟಕದ ಜನರಿಗೆಂದೇ ಈ ಕಾರ್ಯಕ್ರಮ ರೂಪಿಸಲಾಗಿದೆ. ರೋಗಿಗಳನ್ನು ಅಪಾಯದಿಂದ ಪಾರು ಮಾಡಿ ಅವರಿಗೆ ಅಂಗಾಂಗ ಕಸಿಗೆ ತಗಲುವ ವೆಚ್ಚವನ್ನು ಭರಿಸಲು ಆರ್ಥಿಕ ನೆರವು ನೀಡುವಂತೆ ಸಾರ್ವಜನಿಕರಲ್ಲಿ ನಾವು ನಿರಂತರವಾಗಿ ಮನವಿ ಮಾಡುತ್ತಾ ಬಂದಿದ್ದೇವೆ. ಈ ಮೂಲಕ ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಕಾರ್ಯನಿರತರಾಗಿದ್ದೇವೆ ಎಂದು ತಿಳಿಸಿದರು.
ಎಚ್ಪಿಬಿ ಮಲ್ಟಿ ಆರ್ಗನ್ ಟ್ರಾನ್ಸ್ ಪ್ಲಾಂಟೇಷನ್ ಕನ್ಸಲ್ಟೆಂಟ್ ಡಾ.ಸುರೇಶ್ ರಾಘವಯ್ಯ, ಮಲ್ಟಿ ಆರ್ಗನ್ ಟ್ರಾನ್ಸ್ಪ್ಲಾಂಟ್ಸ್ ಕನ್ಸಲ್ಟೆಂಟ್ ಡಾ.ಜಯಂತ್ರೆಡ್ಡಿ ಮತ್ತು ಹೆಪಟೊಲಾಜಿಸ್ಟ್ ಅಂಡ್ ಲಿವರ್ ಟ್ರಾನ್ಸ್ಪ್ಲಾಂಟೇಷನ್ ಕನ್ಸಲ್ಟೆಂಟ್ ಡಾ.ಸಂದೀಪ್ ಅವರನ್ನೊಳಗೊಂಡ ತಮ್ಮ ನೇತೃತ್ವದ ತಜ್ಞ ವೈದ್ಯರ ತಂಡ ಈ ಬಹು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುತ್ತಿದೆ ಎಂದು ಹೇಳಿದರು.
ಯುರಿನರಿ ಬ್ಲಾಡರ್ ಟ್ಯುಬರ್ಕ್ಯುಲೋಸಿಸ್ನಿಂದ ಬಳಲುತ್ತಿದ್ದ 26 ವರ್ಷದ ಯುವಕನನ್ನು ತಪಾಸಣೆ ನಡೆಸಿದಾಗ ತುಂಬಾ ಸಂಕೀರ್ಣತೆಯ ರೋಗದಿಂದ ಬಳಲುತ್ತಿದ್ದರು. ಹಲವು ಆಸ್ಪತ್ರೆಯಲ್ಲಿ ಆರಂಭಿಕ ಚಿಕಿತ್ಸೆಯಲ್ಲಿ ಆ್ಯಂಟಿಟ್ಯುಬರ್ಕ್ಯುಲರ್ ಥೆರಪಿಯನ್ನು ನೀಡಲಾಗಿತ್ತು. ಆದರೆ, ದುರಾದೃಷ್ಟವಶಾತ್, ಎಟಿಟಿ ಔಷಧಿಗಳ ಬಳಕೆಯಿಂದ ಅವರಿಗೆಗಂಭೀರ ಸ್ವರೂಪದ ಪ್ರತಿಕ್ರಿಯೆಗಳಾಗಿ ಲಿವರ್ ವೈಫಲ್ಯವಾಯಿತು. ಈ ಅಕ್ಯೂಟ್ ಲಿವರ್ ಫೇಲ್ಯುರ್ ಅಥವಾ ಎಎಲ್ಎಫ್ ಎಂದು ಕರೆಯಲಾಗುವ ಇದು ತೀವ್ರ ಅಪಾಯದ ಪರಿಸ್ಥಿತಿಯದ್ದಾಗಿದೆ. ಇದರಿಂದ ಶೇ.56 ರಿಂದ 80 ರಷ್ಟು ಸಾವು ಸಂಭವಿಸುತ್ತವೆ. ಈ ಹಂತದಲ್ಲಿ ವೈದ್ಯರುರೋಗಿಯನ್ನು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಹೆಚ್ಚಿನ ತಪಾಸಣೆಗೆ ಕಳುಹಿಸಿಕೊಟ್ಟರು.
ಇಲ್ಲಿ ತಪಾಸಣೆ ನಡೆಸಿದ ವೈದ್ಯರ ತಂಡ ತುರ್ತಾಗಿ ಲಿವರ್ ಕಸಿ ಮಾಡಲು ನಿರ್ಧರಿಸಿತು. ಅದೃಷ್ಟವಶಾತ್, ಅವರಿಗೆ ಅವರ ಸಂಬಂಧಿ ಲಿವರ್ ಕೊಡಲು ಮುಂದೆ ಬಂದರು. ಯಾವುದೇ ತೊಂದರೆ ಇಲ್ಲದೇ ಲಿವರ್ ಕಸಿ ನಡೆಯಿತು.ಇಂದು ಲಿವರ್ ನೀಡಿದವರು ಮತ್ತು ಕಸಿ ಮಾಡಿಸಿಕೊಂಡವರಿಬ್ಬರೂ ಆರೋಗ್ಯವಾಗಿದ್ದಾರೆ. ಅದೇರೀತಿ ರೋಗಿಯು ಗುಣಮುಖರಾಗಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಡಾ.ಸಂಜೀವ್ ವಿವರಿಸಿದರು.
ಮತ್ತೊಂದು ಪ್ರಕರಣದಲ್ಲಿ 46 ವರ್ಷದತುಮಕೂರಿನ ಮಹಿಳೆ ಕಾಮಾಲೆ ಮತ್ತು ಅಸಾಮಾನ್ಯ ರೀತಿಯಲ್ಲಿ ತೂಕ ಹೆಚ್ಚಳವಾಗಿ, ಉಸಿರಾಟದಲ್ಲಿ ಏರುಪೇರು ಸೇರಿದಂತೆ ಮತ್ತಿತರೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಕೊನೆಗೆ ಅವರು ಕೋಮಾ ಸ್ಥಿತಿಗೆ ತಲುಪಿದರು. ಈ ಸಂದರ್ಭದಲ್ಲಿಅವರಿಗೆ ಲಿವರ್ ಕಸಿ ಮಾಡಬೇಕಾದ ಅನಿವಾರ್ಯತೆಇತ್ತು.ಅವರ ಮಗಳು ಲಿವರ್ ನೀಡಲು ನಿರ್ಧರಿಸಿದರು. 2017 ರಲ್ಲಿ ಲಿವರ್ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.ಇದೀಗ ತಾಯಿ ಮತ್ತು ಮಗಳಿಬ್ಬರೂ ಆರೋಗ್ಯದಿಂದಇದ್ದಾರೆ ಎಂದು ತಿಳಿಸಿದರು.
ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಜಾ ಸುರೇಶ್ ಮಾತನಾಡಿ, ಹೊಚ್ಚ ಹೊಸದಾದ ವೈದ್ಯಕೀಯ ಯಂತ್ರೋಪಕರಣಗಳಿಂದ ಗಂಭೀರ ಸ್ವರೂಪದ ರೋಗಿಗಳಿಗೆ ಚಿಕಿತ್ಸೆ ನೀಡಡುತ್ತಿದ್ದೇವೆ. ಕರ್ನಾಟಕದಲ್ಲಿ ಲಿವರ್ ಐಸಿಯು ಹೊಂದಿರುವ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಬಿಜಿಎಸ್ಗ್ಲೆನಿಗಲ್ಸ್ಗ್ಲೋಬಲ್ ಹಾಸ್ಪಿಟಲ್ ಪಾತ್ರವಾಗಿದೆಎಂದು ತಿಳಿಸಿದರು.