ಚೋಕ್ಸಿಯನ್ನು ಬಂಧಿಸಲು ಭಾರತದ ಯಾವುದೇ ತಂಡ ಬಂದಿಲ್ಲ:ಅಂಟಿಗುವಾ ಸಚಿವಾಲಯದ ಮುಖ್ಯಸ್ಥ ಲಿಯೋನೆಲ್ ಮ್ಯಾಕ್ಸ್

ಅಂಟಿಗುವಾ, ಜ.28-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ಭ್ರಷ್ಟ ಆರ್ಥಿಕ ಅಪರಾಧಿಯಾಗಿ ಅಂಟಿಗುವಾ ಮತ್ತು ಬರ್‍ಬುಡಾಸ್ ದ್ವೀಪದಲ್ಲಿ ಆಶ್ರಯ ಪಡೆದಿರುವ ಲೇಹೂಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರುವ ಪ್ರಯತ್ನವನ್ನು ಸಿಬಿಐ ತೀವ್ರಗೊಳಿಸಿರುವಾಗಲೇ ನಿರಾಸದಾಯಕ ಹೇಳಿಕೆಯೊಂದು ಆ ದೇಶದಿಂದ ಕೇಳಿ ಬಂದಿದೆ.

ಚೋಕ್ಸಿ ಬಂಧಿಸಲು ಭಾರತದ ಯಾವುದೇ ತಂಡ ನಮ್ಮ ದೇಶಕ್ಕೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಅಂಟಿಗುವಾ ಪ್ರಧಾನಮಂತ್ರಿ ಗಸ್ಟನ್‍ಬೌನ್ವೆ ಅವರ ಕಾರ್ಯಾಲಯದ ಮುಖ್ಯಸ್ಥ ಲಿಯೋನೆಲ್ ಮ್ಯಾಕ್ಸ್ ಸ್ಪಷ್ಟಪಡಿಸಿದ್ದಾರೆ.

ನಮ್ಮ ದೇಶಕ್ಕೆ ಭಾರತದ ಯಾವುದೇ ತನಿಖಾ ತಂಡ ಬಂದಿಲ್ಲ. ಅಥವಾ ಆಗಮಿಸಲಿದೆ ಎಂಬ ಮಾಹಿತಿಯೂ ನಮಗಿಲ್ಲ ಎಂದು ತಿಳಿಸಿದ್ದಾರೆ.
ಚೋಕ್ಸಿಯನ್ನು ಬಂಧಿಸಿ ಭಾರತಕ್ಕೆ ಕರೆತರಲು ವಿಶೇಷ ತಂಡ ವಿಮಾನದಲ್ಲಿ ಅಂಟಿಗುವಾಗೆ ತೆರಳಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಕೇಳಿ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ