ಎನ್.ಡಿ.ಎಫ್.ಬಿ. ಮುಖ್ಯಸ್ಥ ರಂಜನ್ ಡೈಮರಿ ಸೇರಿ 15 ಮಂದಿ ದೋಷಿಗಳು: ಸಿಬಿಐ ವಿಶೇಷ ನ್ಯಾಯಾಲಯ

ಗುವಾಹತಿ ಜ.28-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ 2008ರಲ್ಲಿ 88 ಜನರನ್ನು ಬಲಿ ತೆಗೆದುಕೊಂಡ ಸರಣಿ ಸ್ಫೋಟ ಪ್ರಕರಣದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‍ಡಿಎಫ್‍ಬಿ) ಮುಖ್ಯಸ್ಥ ರಂಜನ್ ಡೈಮರಿ ಮತ್ತು ಇತರ 14 ಮಂದಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಇಂದು ದೋಷಿಗಳೆಂದು ಘೋಷಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಅಪಾರೇಶ್ ಚಕ್ರವರ್ತಿ ಡೈಮರಿ ಮತ್ತು ಇತರ 14 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ್ದರು. ಅವರ ಶಿಕ್ಷೆ ಪ್ರಮಾಣವನ್ನು ಬುಧವಾರ ನ್ಯಾಯಾಲಯ ಪ್ರಕಟಿಸಲಿದೆ.

ಎನ್‍ಡಿಎಫ್‍ಬಿ ಪ್ರತ್ಯೇಕವಾದಿಗಳ ಸಂಘಟನೆ 30ನೇ ಅಕ್ಟೋಬರ್ 2008ರಲ್ಲಿ ಅಸ್ಸಾಂ ರಾಜಧಾನಿ ಗುವಾಹತಿ, ಕೊಕ್ರಾಜಾರ್, ಬಾಂಗೈಗಾಂವ್ ಮತ್ತು ಬಾರ್‍ಪೇಟಾಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಿತ್ತು.

ಈ ವಿಧ್ವಂಸಕ ಕೃತ್ಯದಲ್ಲಿ 88 ಮಂದಿ ಹತರಾಗಿ ಅನೇಕರು ತೀವ್ರ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೊಂಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ