ರಕ್ಷಣಾ ಸಚಿವಾಲಯದಿಂದ ಇಸ್ರೇಲಿನಿಂದ ಡ್ರೋಣ್‍ಗಳನ್ನು ಐಎಎಫ್‍ಗೆ ಸೇರ್ಪಡೆ ಮಾಡಿಕೊಳ್ಳಲು ಚಿಂತನೆ

ನವದೆಹಲಿ, ಜ.28-ಭಾರತೀಯ ವಾಯು ಪಡೆ (ಐಎಎಫ್)ಯ ಮಾನವ ರಹಿತ ಸಮರ ಸಾಮಥ್ರ್ಯವನ್ನು ಬಲಗೊಳಿಸಲು ಕೇಂದ್ರ ಸರ್ಕಾರ ಇಸ್ರೇಲ್‍ನಿಂದ 15 ಹರೋಪ್ ಆಕ್ರಮಣ ಡ್ರೋಣ್‍ಗಳನ್ನು ಹೊಂದಲು ಚಿಂತನೆ ನಡೆಸಿದೆ.

ವೈರಿ ಸೇನಾ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಈ ಡ್ರೋಣ್‍ಗಳು ಪ್ರಸ್ತುತ ಸನ್ನಿವೇಶದಲ್ಲಿ ಐಎಎಫ್‍ಗೆ ಅತ್ಯಂತ ಮಹತ್ವದ್ದಾಗಿದೆ.

ವೈರಿಗಳ ಕಣ್ಗಾವಲು ನೆಲೆಗಳು ಮತ್ತು ರೇಡಾರ್ ಕೇಂದ್ರಗಳನ್ನು ಗುರುತಿಸುವ ಎಲೆಕ್ಟ್ರೋ-ಆಫ್ಟಿಕಲ್ ಸೆನ್ಸೊರ್‍ಗಳನ್ನು ಈ ಅಟ್ಯಾಕ್ ಡ್ರೋನ್‍ಗಳು ಹೊಂದಿದ್ದು, ಅವುಗಳನ್ನು ನಿರ್ನಾಮ ಮಾಡುವ ಅಗಾಧ ಸಾಮಥ್ರ್ಯ ಪಡೆದಿದೆ.

ಅಮೆರಿಕ ಸೇನಾ ಪಡೆಗಳು ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇರಾಕ್‍ನಲ್ಲಿ ಉಗ್ರಗಾಮಿ ನಾಯಕರನ್ನು ಹತ್ಯೆ ಮಾಡಲು ಇದೇ ರೀತಿ ಸಮರ ಡ್ರೋಣ್‍ಗಳನ್ನು ಬಳಸುತ್ತಿವೆ.

ಇಸ್ರೇಲ್‍ನ ಪ್ರಬಲ ಡ್ರೋಣ್‍ಗಳನ್ನು ಐಎಎಫ್‍ಗೆ ಸೇರ್ಪಡೆ ಮಾಡಿಕೊಳ್ಳಲು ರಕ್ಷಣಾ ಸಚಿವಾಲಯ ಗಂಭೀರ ಚಂತನೆ ನಡೆಸಿದೆ. ಈ ಸಂಬಂಧ ಮುಂದಿನ ವಾರ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ