ಮೌಂಟ್ ಮೌಂಗನೂಯಿ:ಟಿವಿ ಟಾಕ್ ಶೋನಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸ್ ಆಗಿದ್ದು ಅದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ.
ಮೌಂಟ್ ಮೌಂಗನೂಯಿ ಅಂಗಳದಲ್ಲಿ ನಡೆದ 3ನೇ ಏಕದಿನ ಪಂದ್ಯದ ಯಜ್ವಿಂದರ್ ಚಹಲ್ ಅವರ 17ನೇ ಓವರ್ನಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ನೀಡಿದ ಕ್ಯಾಚನ್ನ ಮಿಡ್ ವಿಕೆಟ್ನಲ್ಲಿದ್ದ ಹಾರ್ದಿಕ್ ಪಾಂಡ್ಯ ಆಕರ್ಷಕವಾಗಿ ಕ್ಯಾಚ್ ಹಿಡಿದ ಮಿಂಚಿದ್ರು.
ಈ ಕ್ಯಾಚ್ನೊಂದಿಗೆ ಹಾರ್ದಿಕ್ ಪಾಂಡ್ಯ ತಮ್ಮ ಆಯ್ಕೆಯನ್ನ ಸರಿಯಾಗಿದೆ ಅನನೊದನ್ನ ಸಾಬೀತು ಪಡಿಸಿದ್ರು.
ಹಾರ್ದಿಕ್ ಪಾಂಡ್ಯ ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆಡಬೇಕಿತ್ತು. ಆದರೆ ಟಿವಿ ಟಾಕ್ ಶೋನಲ್ಲಿ ನಾಲೆಗೆ ಹರಿಬಿಟ್ಟು ಸರನಿಯಿಂದಲೇ ಕಿಕ್ಔಟ್ ಆಗಿದ್ರು.