ಚಂದಾ ಕೊಚ್ಚಾರ್​ ಹಾಗೂ ದೀಪಕ್​ ಕೊಚ್ಚಾರ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಸಿಬಿಐ ಅಧಿಕಾರಿ ವರ್ಗಾವಣೆ

ನವದೆಹಲಿ: ಅಕ್ರಮ ಸಾಲ ನೀಡಿದ್ದ ಆರೋಪದಡಿ ಐಸಿಐಸಿಐ ಬ್ಯಾಂಕ್​ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್​ ಹಾಗೂ ಆಕೆ ಪತಿ ದೀಪಕ್​ ಕೊಚ್ಚಾರ್​ ಹಾಗೂ ವಿಡಿಯೋಕಾನ್​ ಗ್ರೂಪ್​ ಮುಖ್ಯಸ್ಥ ವೇಣುಗೋಪಾಲ್​ ಧೂಟ್​ ಅವರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಸಿಬಿಐ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಸಿಬಿಐನ ಬ್ಯಾಂಕಿಂಗ್​ ಮತ್ತು ಭದ್ರತಾ ಫ್ರಾಡ್​ ಸೆಲ್​ ನ ಎಸ್​ಪಿ ಸುಧಾಂಶು ಧಾರ್ ಮಿಶ್ರಾ ಇವರೆಲ್ಲರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ಈಗ ಅವರನ್ನು ಜಾರ್ಖಂಡ್​ ರಾಂಚಿಯ ಸಿಬಿಐ ಆರ್ಥಿಕ ಅಪರಾಧ ಶಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಸುಧಾಂಶು ಜ.22ರಂದು ಎಫ್​ಐಆರ್​ಗೆ ಸಹಿ ಹಾಕಿದ್ದರು. ನಂತರ ಜ.24ರಂದು ಪ್ರಕರಣ ದಾಖಲಿಸಲಾಗಿತ್ತು. ವಿಡಿಯೋಕಾನ್ ಸಂಸ್ಥೆಯು ಐಸಿಐಸಿಐ ಬ್ಯಾಂಕ್​ನಿಂದ 3250 ಕೋಟಿ ರೂ. ಸಾಲವನ್ನು 2012ರಲ್ಲಿ ಅಕ್ರಮವಾಗಿ ಪಡೆದಿತ್ತು. ಆದರೆ ಈ ಸಾಲದ ಮೊತ್ತವನ್ನು ವಿಡಿಯೋಕಾನ್ ಹೂಡಿಕೆದಾರ ಧೂತ್ ಮೂಲಕ ಕೊಚ್ಚಾರ್ ಅವರ ಇನ್ನೊಂದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಹಾಗೆಯೇ ಈ ಸಾಲದ ಮೊತ್ತವನ್ನು ಚಂದಾ ಅವರು ಐಸಿಐಸಿಐ ವಾರ್ಷಿಕ ಲೆಕ್ಕಾಚಾರದಿಂದ ಗೌಪ್ಯವಾಗಿರಿಸಿಟ್ಟಿದ್ದರು ಎಂಬ ಆರೋಪವಿದೆ.

Videocon loan case: CBI officer transferred a day after signing FIR against accused

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ