ಕಿವೀಸ್ ಗೆ ಮತ್ತೆ ವಿಲನ್ಸ್ ಆದ್ರು ಟೀಂ ಇಂಡಿಯಾ ಸ್ಪಿನ್ನರ್ಸ್

ಮೌಂಟ್ ಮೌಂಗನೂಯಿ ಅಂಗಳದಲ್ಲಿ ಮೊದಲ ಬಾರಿ ಆಡಿದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಅವಿಸ್ಮರಣಿಯವಾಗಿರಿಸಿಕೊಂಡಿದೆ. ಬ್ಯಾಟ್ಸ್ಮನ್ಗಳಿಗೆ ನೆರವಾಗುವ ಮೌಂಟ್ ಮೌಂಗನೂಯಿ ಅಂಗಳದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ಸ್ಗಳು ಕಿವೀಸ್ ಬ್ಯಾಟ್ಸ್ ಮನ್ಗಳ ಪಾಲಿಗೆ ರಿಯಲ್ ವಿಲನ್ ಆದ್ರು., ಅದರಲ್ಲೂ ಚೈನಾಮನ್ ಸ್ಪಿನ್ನರ್ಸ್ ಕುಲ್ದೀಪ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ರು.

ಇದಕ್ಕೂ ಮುನ್ನ ಕಿವೀಸ್ ತಂಡದ ಸ್ಟಾರ್ ಸ್ಪಿನ್ನರ್ ಇಶ್ ಸೋಧಿಯ ಯಾವ ಸ್ಪಿನ್ ಮ್ಯಾಜಿಕ್ ಕೂಡ ಟೀಂ ಇಂಡಿಯಾ ಬ್ಯಾಟ್ಸ್ ಮನ್ಗಳ ಮುಂದೆ ನಡೆಯಲಿಲ್ಲ. ಹೀಗಾಗಿ ಸ್ಪಿನರ್ಸ್ಗಳ ದರ್ಬಾರ್ ನಡೆಯೊಲ್ಲ ಎಂದೇ ಎಲ್ಲರೂ ಭಾವಿಸಿದ್ರು. ಆದರೆ ಫೀಲ್ಡಿಂಗ್ ಇಳಿದ ಟೀಂ ಇಂಡಿಯಾ ಸ್ಪಿನ್ನರ್ಸ್ಗಳು ಬ್ಯಾಟಿಂಗ್ ಟ್ರ್ಯಾಕ್ನಲ್ಲಿ ಮ್ಯಾಚ್ ವಿನ್ನರ್ಸ್ಗಳಾಗಿ ಹೊರ ಹೊಮ್ಮಿದ್ರು.

325 ರನ್ಗಳ ಬಿಗ್ ಟಾರ್ಗೆಟ ನ್ನ ಕಾನ್ಫಿಡೆನ್ಸ್ನಿಂದಲೇ ಬೆನ್ನತ್ತಿದ ಕೇನ್ ವಿಲಿಯಮನ್ಸ್ ಪಡೆ ಟೀಂ ಇಂಡಿಯಾ ಸ್ಪಿನ್ನರ್ಸ್ಗಳ ದಾಳಿಗೆ ಪತರಗುಟ್ಟಿ ಹೋಯ್ತು. ಚೇಸಿಂಗ್ ಮಾಡಬಹುದಾದ ಪಿಚ್ನಲ್ಲಿ ಟೀಂ ಇಂಡಿಯಾ ಸ್ಪಿನ್ನರ್ಸ್ಗಳ ಸೂಪರ್ ಸ್ಪೆಲ್ಗೆ ಕಿವೀಸ್ ಬ್ಯಾಟ್ಸ್ಮನ್ಗಳು ಒಂದೊಂದು ರನ್ ಗಳಿಸೋಕು ತಿಣುಕಾಡಿದ್ರು.
11ನೇ ಓವರ್ನಲ್ಲಿ ದಾಳಿಗಿಳಿದ ಸ್ಪಿನ್ನರ್ಸ್ಗಳಾದ ಯಜ್ವಿಂದರ್ ಚಹಲ್, ಕುಲ್ದೀಪ್ ಯಾದವ್ ಮತ್ತು ಪಾರ್ಟ್ ಟೈಮ್ ಸ್ಪಿನ್ನರ್ ಕೇದಾರ್ ಜಾಧವ್ ಕಿವೀಸ್ ಬ್ಯಾಟ್ಸ್ಮನ್ಗಳ ಯೆಡೆಮುರಿ ಕಟ್ಟಿದ್ರು.

ಯಜ್ವಿಂದರ್ ಚಹಲ್
ಓವರ್ : 9.2
ವಿಕೆಟ್ : 2
ರನ್ : 52

ಆರಂಭದಲ್ಲೆ ಅಟ್ಯಾಕ್ಗೆ ಇಳಿದ ಚಹಲ್ 15ನೇ ಓವರ್ನ ಮೊದಲ ಎಸೆತದಲ್ಲೆ ಡೇಂಜರಸ್ ಬ್ಯಾಟ್ಸ್ ಮನ್ ಕಾಲಿನ್ ಮನ್ರೊ ಅವರನ್ನ ಎಲ್ಬಿ ಬಲೆಗೆ ಬೀಳಿಸಿದ್ರು. ಇದಾದ ನಂತರ ಡೆತ್ ಓವರ್ನಲ್ಲಿ ದಾಳಿಗಿಳಿದ ಚಹಲ್ ಫರ್ಗುಸನ್ ಗೂ ಪೆವಲಿಯನ್ ದಾರಿ ತೋರಿಸಿದ್ರು. ಒಟ್ಟು 9.2 ಓವರ್ ಮಾಡಿದ ಚಹಲ್ 52 ರನ್ ಕೊಟ್ಟು 2 ವಿಕೆಟ್ ಪಡೆದು ಮಿಂಚಿದ್ರು.

ಕೇದಾರ್ ಜಾಧವ್
ಓವರ್ : 6
ವಿಕೆಟ್ : 1
ರನ್ : 35

ತಂಡದ ಆಲ್ರೌಂಡರ್ ಕೇದಾರ್ ಜಾಧವ್ ತಂಡದ ಪಾರ್ಟ್ ಟೈಮ್ ಸ್ಪಿನ್ನರ್ರಾಗಿ ಅಗತ್ಯ ಸಂದರ್ಭದಲ್ಲಿ ನೆರವಾಗುತ್ತಿದ್ದಾರೆ. ನಿನ್ನೆ ಕಿವೀಸ್ ವಿರುದ್ದದ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ರಾಸ್ ಟೇಲರ್ ಅವರನ್ನ ಬಲಿ ಪಡೆದು ಪಂದ್ಯಕ್ಕೆ ದೊಡ್ಡ ಟ್ವಿಸ್ಟ್ ನೀಡಿದ್ರು. ಭರ್ಜರಿ ಪಾರ್ಮ್ನಲ್ಲಿರುವ ರಾಸ್ ಟೇಲರ್ ಕೇದಾರ್ ಜಾಧವ್ ಅವರ ಸೂಪರ್ ಸ್ಪೆಲ್ಗೆ ಬಲಿಯಾದ್ರು. 6 ಓವರ್ಗಳನ್ನ ಪೂರ್ಣಗೊಳಿಸಿದ ಜಾಧವ್ ಕೇವಲ 35 ರನ್ ನೀಡಿದ್ರು.
ಉಜಿx : ಕುಲ್ದೀಪ್ ಯಾದವ್
ಓವರ್ – 10
ವಿಕೆಟ್ – 4
ರನ್ – 45
ಮಿಡ್ಲ್ ಓವರ್ನಲ್ಲಿ ದಾಳಿಗಿಳಿದ ಕುಲ್ದೀಪ್ ಆರಂಭದಲ್ಲೆ ಕಿವೀಸ್ ಬ್ಯಾಟ್ಸ್ ಮನ್ಗಳ ರನ್ ವೇಗಕ್ಕೆ ಕಡಿವಾಣ ಹಾಕಿದ್ರು. ಕುಲ್ ದೀಪ್ ಸೂಪರ್ ಸ್ಪೆಲ್ಗೆ ಕಿವೀಸ್ ನ ಮಿಡ್ಲ್ ಆರ್ಡರ್ ಬ್ಯಾಟ್ಸ್ ಮನ್ಗಳು ಒಂದೊಂದು ರನ್ ಗಳಿಸೋಕು ಪರದಾಡಿದ್ರು.

ನಾಲ್ಕು ವಿಕೆಟ್ ಪಡೆದ ಮಿಸ್ಟ್ರಿ ಬೌಲರ್ ಕುಲ್ದೀಪ್
ಮೊದಲ ಎರಡು ಓವರ್ಗಳಲ್ಲಿ ವಿಕೆಟ್ ಪಡೆಯದೇ ನಿರಾಸೆ ಅನುಭವಿಸಿದ್ದ ಕುಲ್ದೀಪ್ ಯಾದವ್ ತಮ್ಮ ಮೂರನೇ ಓವರ್ನಲ್ಲಿ ಟಾಮ್ ಲಾಥಮ್ ಅವರನ್ನ ಎಲ್ಬಿ ಬಲೆಗೆ ಕೆಡವಿದ್ರು. ನಂತರ 27ನೇ ಓವರ್ನಲ್ಲಿ ದಾಳಿಗಿಳಿದು ಆಲ್ರೌಂಡರ್ ಗ್ರಾಂಡ್ ಹೋಮ್ ಗೂ ಪೆವಿಲಿಯನ್ ದಾರಿ ತೋರಿಸಿದ್ರು. 31 ಓವರ್ನಲ್ಲಿ ಹೆನ್ರಿ ನಿಕೊಲೊಸ್ ಮತ್ತು ಇಶ್ ಸೋಧಿಗೂ ಪೆವಿಲಿಯನ್ ದಾರಿ ತೋರಿಸಿದ್ರು. ಇದರೊಂದಿಗೆ ಕುಲ್ದೀಪ್ ಒಟ್ಟು ನಾಲ್ಕು ವಿಕೆಟ್ ಪಡೆದು ಮಿಂಚಿದ್ರು. ಜೊತೆಗೆ ಸರಣಿಯಲ್ಲಿ ಸತತ ಎರಡನೇ ಬಾರಿಗೆ ನಾಲ್ಕು ವಿಕೆಟ್ಗಳ ಪಡೆದು ಕಿವೀಸ್ ನಾಡಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದ್ರು.
ಒಟ್ನಲ್ಲಿ ತಂಡದ ಸ್ಪಿನ್ ಬೌಲರ್ಸ್ ಗಳು ಮ್ಯಾಚ್ ವಿನ್ನಿಂಗ್ ಪರ್ಫಾಮನ್ಸ್ ಕ್ಯಾಪ್ಟನ್ ಕೊಹ್ಲಿಗೆ ಫುಲ್ ಖುಷಿ ಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ