ನವದೆಹಲಿ: ನಿರ್ಧಿಷ್ಟ ಗುರಿಯೊಂದಿಗೆ ನಮ್ಮ ಹಕ್ಕು ಚಲಾಯಿಸೋಣ. ನಮ್ಮ ನಿರ್ಧಾರ ರಾಷ್ಟ್ರದ ದಿಕ್ಕನ್ನೇ ಬದಲಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.
ಗಣರಾಜ್ಯೋತ್ಸವ ಮುನ್ನಾ ದಿನವಾದ ಇಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್, ದೇಶದ ಜನತೆಗೆ 70ನೇ ಗಣರಾಜ್ಯೋತ್ಸವದ ಶುಭಾಷಯಗಳು ಎಂದರು.
ಈ ಬಾರಿ ಗಣರಾಜ್ಯೋತ್ಸವ ತುಂಬಾ ವಿಶೇಷವಾಗಿದೆ. ಕಾರಣ ಗಾಂಧೀಜಿಯವರ 150ನೇ ಹುಟ್ಟುಹಬ್ಬದ ಬಳಿಕ ಬಂದಿದೆ. ಗಾಂಧೀಜಿಯವರ ಸಿದ್ಧಾಂತವನ್ನು ಇಡೀ ವಿಶ್ವವವೇ ಪಾಲಿಸುತ್ತದೆ. ಈ ವೇಳೆ ಭಾರತ ರತ್ನ ಡಾ.ಬಿ ಆರ್ ಆಂಬೇಡ್ಕರ್ ಅವರನ್ನು ಸ್ಮರಿಸೋಣ. ಅವರ ಸ್ಮರಣಾರ್ಥ ಸಂವಿಧಾನ ದಿನಾಚರಣೆ ಆಚರಿಸೋಣ ಎಂದರು.
ದೇಶದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಬಡತನ ನಿರ್ಮೂಲನೆಯತ್ತ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ. ಸರ್ವರಿಗೂ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಯುನಿವರ್ಸಲ್ ಹೆಲ್ತ್ ಕೇರ್ ಜಾರಿಯಾಗಿದೆ. ಬಂದರು, ಒಳನಾಡು, ಗ್ರಾಮಾಂತರ ಭಾಗದ ರಸ್ತೆಗಳ ಗುಣಮಟ್ಟ ಸುಧಾರಣೆಯಾಗಿದೆ.
ಸಹಭಾಗಿತ್ವದಿಂದ ಎಲ್ಲವೂ ಸಾಧ್ಯ ಎಂಬುದು ಧೃಡಪಟ್ಟಿದೆ ಎಂದರು.
2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನಲೆಯಲ್ಲಿ ನಿರ್ಧಿಷ್ಟ ಗುರಿಯೊಂದಿಗೆ ನಮ್ಮ ಹಕ್ಕು ಚಲಾಯಿಸೋಣ. ನಮ್ಮ ನಿರ್ಧಾರ ರಾಷ್ಟ್ರದ ದಿಕ್ಕನ್ನೇ ಬದಲಿಸುತ್ತದೆ ಎಂದು ಕೋವಿಂದ್ ತಿಳಿಸಿದ್ದಾರೆ.
President Ram Nath Kovind to address nation on 70th Republic Day