ನೇತ್ರ ಪರೀಕ್ಷೆ ನಂತರ ಮತ್ತೆ ಅಪೋಲೋ ಆಸ್ಪತ್ರೆಗೆ ಶಾಸಕ ಆನಂದ್ ಸಿಂಗ್

ಬೆಂಗಳೂರು, ಜ.25- ಈಗಲ್‍ಟನ್ ರೆಸಾರ್ಟ್‍ನಲ್ಲಿ ಜನವರಿ 20ರಂದು ನಡೆದ ಗಲಾಟೆಯಲ್ಲಿ ಗಾಯಗೊಂಡು ಅಪೆÇೀಲೋ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರನ್ನು ವೈದ್ಯರ ಸಲಹೆ ಮೇರೆಗೆ ನಾರಾಯಣ ನೇತ್ರಾಲಯಕ್ಕೆ ಕರೆತಂದು ನೇತ್ರ ಪರೀಕ್ಷೆ ಮತ್ತು ಸಲಹೆಯ ನಂತರ ಮತ್ತೆ ಅಪೆÇೀಲೋ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಅವರ ಸ್ಥಿತಿ ಕುರಿತು ನಾರಾಯಣ ನೇತ್ರಾಲಯದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗಶೆಟ್ಟಿ ಮಾತನಾಡಿ, ಆನಂದ್‍ಸಿಂಗ್ ಅವರ ಕಣ್ಣು ಸುತ್ತುವರಿದ ಮೂಳೆ ಹಾನಿಗೊಂಡಿರುವುದರಿಂದ ಅವರ ಬಲಗಣ್ಣು ಗಾಯಗೊಂಡು ಕೆಲ ಕೋನಗಳಲ್ಲಿ ಎರಡು ನೋಟ ಕಾಣುತ್ತಿದೆ.ಅವರಿಗೆ ಹೊರಗಿನ ರಕ್ತಸ್ರಾವವೂ ಆಗಿದ್ದು ಅದು ಗುಣವಾಗಲು 10-15 ದಿನಗಳು ಬೇಕಾಗುತ್ತದೆ.ಗಾಯದಿಂದ ಅವರ ಎರಡೂ ಕಣ್ಣರೆಪ್ಪೆಗಳು ಊದಿಕೊಂಡಿವೆ. ಆದರೆ ದೃಷ್ಟಿಗೆ ಯಾವುದೇ ಹಾನಿಯುಂಟು ಮಾಡಿಲ್ಲ. ಅವರಿಗೆ ಒಂದು ವಾರ ಚಿಕಿತ್ಸೆ ನೀಡಿ ನಂತರ ಅವರ ಸ್ಥಿತಿಯನ್ನು ಪುನಃ ಪರೀಕ್ಷಿಸಲಾಗುತ್ತದೆ. ಅವರ ಎರಡು ನೋಟ ಮತ್ತು ಮೂಳೆಯ ಏಟು ಸುಧಾರಣೆಯಾಗದೇ ಇದ್ದಲ್ಲಿ ನಾವು ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ ವಿವರ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ