ಯೋಧ ನಜೀರ್ ಅಹಮದ್ ವಾನಿಗೆ ಮರಣೋತ್ತರ ಅಶೋಕ ಚಕ್ರ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದ ಯೋಧ ನಜೀರ್‌ ಅಹಮ್ಮದ್‌ ವಾನಿ ಅವರಿಗೆ ಈ ಬಾರಿಯ ಗಣರಾಜೋತ್ಸವ ಸಂದರ್ಭದಲ್ಲಿ ಅಶೋಕ ಚಕ್ರ ನೀಡಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ವಾನಿ ಅವರು ಉಗ್ರ ಸಂಘಟನೆ ತೊರೆದು 2004ರಲ್ಲಿ ಭಾರತೀಯ ಸೇನೆ ಸೇರಿದ್ದರು. ಯೋಧರಿಗೆ ಭಾರತ ಸರ್ಕಾರ ನೀಡುವ ಅತ್ಯುತ್ತಮ ಪ್ರಶಸ್ತಿ ಇದಾಗಿದೆ.

2018ರ ನವೆಂಬರ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ನಜೀರ್‌ ವಾನಿ ಹತರಾಗಿದ್ದರು. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಆರು ಮಂದಿ ಉಗ್ರರನ್ನು ಹೊಡೆದುರುಳಿಸಿತ್ತು. ವಾನಿ, ಕಾಶ್ಮೀರದ 162ನೇ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2007, 2017ರಲ್ಲಿ ಸೇನೆಯಿಂದ ಪದಕವನ್ನು ಪಡೆದಿದ್ದರು.

ಸೇನೆಗೆ ಸೇರುವುದಕ್ಕೂ ಮೊದಲು ನಜೀರ್‌, ‘ಇಖ್ವಾನ್’ ಉಗ್ರ ಸಂಘಟನೆಯಲ್ಲಿದ್ದರು. ನಂತರ ಮನಪರಿವರ್ತನೆಯಾಗಿ ಸೇನೆಗೆ ಸೇರಿದ್ದರು.

Lance Naik Nazir Ahmad Wani,Ashok Chakra

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ