ನವದೆಹಲಿ: ಗಣರಾಜ್ಯೋತ್ಸವ ಪರೇಡ್ನಲ್ಲಿ ಇದೇ ಮೊದಲ ಬಾರಿಗೆ ಪುರುಷ ತುಕಡಿಗೆ ಮಹಿಳಾ ಅಧಿಕಾರಿ ಸಾರಥ್ಯ ವಹಿಸಲಿದ್ದಾರೆ. ನವದೆಹಲಿ ರಾಜಪಥ ಮಾರ್ಗದಲ್ಲಿ ಇಡೀ ದೇಶದ ಎದುರು ಲೆಪ್ಟಿನೆಂಟ್ ಭಾವನಾ ಕಸ್ತೂರಿ ಆದೇಶದಂತೆ 144 ಯೋಧರು ಪತಸಂಚಲನ ನಡೆಸಲಿದ್ದಾರೆ.
ಹೈದ್ರಾಬಾದ್ಮೂಲದ ಭಾವನಾ ಕಸ್ತೂರಿ ಎರಡೂವರೆ ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ.
ಸೇನಾ ಮುಖ್ಯಸ್ಥರಿಗೆ ಗೌರವ ಸಲ್ಲಿಸಿ ಅವರ ಎದುರುಗಡೆ ಕಮಾಂಡ್ ನೀಡುವ ಕನಸಿನ ಕ್ಷಣವನ್ನು ಎದುರು ನೋಡುತ್ತಿರುವುದಾಗಿ ಯುವ ಅಧಿಕಾರಿ ಹೇಳಿದ್ದಾರೆ.
ಪರೇಡ್ ವೀಕ್ಷಣೆಗಾಗಿ ಬರುವ ಜನರನ್ನು ನೋಡುವುದಕ್ಕೆ ಕಾತುರವಾಗಿದ್ದು, ತಮ್ಮನ್ನು ನೋಡಿ ಸಹಸ್ರಾರು ಹೆಣ್ಣು ಮಕ್ಕಳು ಸಂತಸಗೊಳ್ಳಲಿದ್ದಾರೆ ಎಂದು ಭಾವನಾ ಕಸ್ತೂರಿ ಸಂತಸ ವ್ಯಕ್ತಪಡಿಸಿದ್ದಾರೆ.
Republic Day, for the first time in the history of Indian Army, a woman officer, Bhavana Kasturi, will lead the Army Service Corps (ASC) contingent, comprising 144 male personnel.