ನವದೆಹಲಿ: ಕರ್ನಾಟಕದ ಏಳು ಮಕ್ಕಳು ಸೇರಿದಂತೆ ವಿವಿಧ ರಾಜ್ಯಗಳ 26 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಲಭಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವತಿಯಿಂದ ನಿಡಲಾಗುವ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರದಾನ ಮಾಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ, ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ದೆಹಲಿಯ ಚೈಲ್ಡ್ ಕೇರ್ ಸಂಸ್ಥೆಗಳಲ್ಲಿ ವಾಸವಿರುವ ಅನೇಕ ಪುಟಾಣಿ ಮಕ್ಕಳೊಡನೆ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.
ಪ್ರತಿ ಪ್ರಶಸ್ತಿಯು ಪ್ರಶಸ್ತಿ ಪದಕ, 1,00,000 ರೂ. ನಗದು, 10,000 ರೂ. ಮಲ್ಯದ ಬುಕ್ ವೋಚರ್, ಪ್ರಮಾಣ ಪತ್ರ ಹೊಂದಿರಲಿದೆ. ಪ್ರಶಸ್ತಿ ಪುರಸ್ಕøತ ಮಕ್ಕಳು ಜ.26ರ ಗಣರಾಜ್ಯ ದಿನದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಬ್ಬರು ವ್ಯಕ್ತಿಗಳು, ಮೂರು ಸಂಸ್ಥೆಗಳಿಗೆ ಬಾಲ ಕಲ್ಯಾಣ ಪುರಸ್ಕಾರ ಲಭಿಸಿದೆ.ಈ ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಬಹುಮಾನ, ಒಂದು ಪದಕ, ಒಂದು ಪ್ರಮಾಣಪತ್ರ ಹೊಂದಿರುತ್ತದೆ. ಸಂಸ್ಥೆಗೆ ನೀಡಲಾಗುವ ಪ್ರಶಸ್ತಿಯು 5,00,000 ರೂ. ನಗದು, ಪ್ರಮಾಣಪತ್ರ ಹಾಗೂ ಪದಕವನ್ನೊಳಗೊಂಡಿರಲಿದೆ.
ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಕರ್ನಾಟಕದ ಮಕ್ಕಳುಗಳೆಂದರೆ ಮೊಹಮ್ಮದ್ ಸೌಹೇಲ್ ಚೀಣ್ಯ ಸಲೀಂಪಾಶಾ, ಅರುಣಿಮಾ ಸೇನ್, ಎ.ಯು. ನಚಿಕೇತ್ ಕುಮಾರ್, ಬಿ.ಆರ್. ಪ್ರತ್ಯಕ್ಷಾ, ನಿಖಿಲ್ ಜಿತೂರಿ, ಎಂ. ವಿನಾಯಕ ಇದಲ್ಲದೆ ಕರ್ನಾಟಕದ ರಂಗಕಹಳೆ ಸಂಸ್ಥೆಗೆ ಪ್ರಶಸ್ತಿ ಲಭಿಸಿದೆ.
President Kovind To Give National Awards To 26 Children