ಇವಿಎಂ ಹ್ಯಾಕಿಂಗ್ ಕುರಿತು ಆರೋಪ: ಸೈಬರ್ ತಜ್ಞ ಸೈಯ್ಯದ್ ಶುಜಾ ವಿರುದ್ಧ ಎಫ್​ಐಆರ್

ನವದೆಹಲಿ: ವಿದ್ಯುನ್ಮಾನ ಮತಯಂತ್ರ(ಇವಿಎಂ) ಹ್ಯಾಕಿಂಗ್ ಕುರಿತು ಆರೋಪ ಮಾಡಿದ್ದ ಸೈಬರ್ ತಜ್ಞ ಸೈಯ್ಯದ್ ಶುಜಾ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಎಫ್​ಐಆರ್ ದಾಖಲಿಸಿದೆ.

ಇವಿಎಂ ಹ್ಯಾಕಿಂಗ್ ಮೂಲಕ ಕಳೆದ ಲೋಕಸಭಾ ಚುನಾವಣೆ ಫಲಿತಾಂಶವನ್ನು ರಿಲಯನ್ಸ್ ಕಮ್ಯುನಿಕೇಷನ್ ನೆರವು ಪಡೆದು ಬಿಜೆಪಿ ಬದಲಿಸಿತ್ತು ಎಂದು ಶುಜಾ ಹೇಳಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ದೆಹಲಿ ಪೊಲೀಸರಲ್ಲಿ ಎಫ್​ಐಆರ್ ದಾಖಲಿಸಿದೆ.

ಪ್ರಕರಣದ ಸಿಬಿಐಗೆ ತನಿಖೆಯ ಜವಾಬ್ದಾರಿ ವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಮೆರಿಕದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಸುದ್ದಿಗೋಷ್ಠಿ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ತನಿಖೆಗೆ ಅಮೆರಿಕದ ನೆರವು ಕೋರುವ ಸಾಧ್ಯತೆಯೂ ಇದೆ.

ಕೇಂದ್ರ ಮಾಜಿ ಸಚಿವ ಗೋಪಿನಾಥ್ ಮುಂಡೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಇವಿಎಂ ಹಗರಣ ಕಾರಣ. ಬಿಜೆಪಿ ಗೆದ್ದಿರುವ ಎಲ್ಲ ರಾಜ್ಯಗಳ ಫಲಿತಾಂಶಕ್ಕೆ ಇವಿಎಂ ಹ್ಯಾಕಿಂಗ್ ಕಾರಣ ಎಂದು ಶುಜಾ ಆರೋಪಿಸಿದ್ದರು. ಆದರೆ ಸೂಕ್ತ ದಾಖಲೆ ನೀಡಿರಲಿಲ್ಲ.
EVM hacking charges sets off political wrangling, EC files police

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ