ವಾರಣಾಸಿ, ಜ.22-ತಮ್ಮ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಮೂಲಕ ದೇಶದ ಜನರಿಗೆ 5,80,000 ಕೋಟಿ ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ತಾವು ಪ್ರತಿನಿಧಿಸಿರುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಇಂದು 15ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎಂದಿನಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ವ್ಯವಸ್ಥೆಯನ್ನು ನಾವು ಬದಲಿಸದೇ ಇದ್ದಿದ್ದರೆ ಜನರನ್ನು ತಲುಪಿದ 5,80,000 ಕೋಟಿ ರೂ.ಗಳಲ್ಲಿ 4,50,000 ಕೋಟಿ ರೂ.ಅನ್ಯರ ಪಾಲಾಗುತ್ತಿತ್ತು ಎಂದು ಅವರು ಹೇಳಿದರು.
ಅನಿವಾಸಿ ಭಾರತೀಯರು(ಎನ್‍ಆರ್‍ಐಗಳು) ಭಾರತದ ರಾಯಭಾರಿಗಳು ಎಂದು ಬಣ್ಣಿಸಿದ ಮೋದಿ, ಇವರು ನಮ್ಮ ದೇಶದ ಸಾಧನೆ-ಸಾಮಥ್ರ್ಯಗಳ ಸಂಕೇತ ಎಂದೂ ಪ್ರಶಂಸಿಸಿದರು.
ಭಾರತೀಯ ಮೂಲದವರು ಮಾರಿಷಸ್, ಪೋರ್ಚುಗಲ್ ಮತ್ತು ಐರ್ಲೆಂಡ್‍ನಂಥ ದೇಶಗಳಲ್ಲಿ ಅತ್ಯುನ್ನತ ನಾಯಕತ್ವ ಅಲಂಕರಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು






